ಉದಯವಾಹಿನಿ, ಬೆಂಗಳೂರು : ಕೇಂದ್ರದ ಕಾನೂನು ವಿರೋಧಿಸಿ ಜ.17ರಿಂದ ‘ಕರ್ನಾಟಕದ’ಲ್ಲಿ ಲಾರಿ ಮಾಲೀಕರು ‘ಅನಿರ್ಧಿಷ್ಟಾವಧಿ ಮುಷ್ಕರ’ಕ್ಕೆ ಕರೆ ನೀಡಿದ್ದಾರೆ.ಕೇಂದ್ರ ಸರ್ಕಾರದಿಂದ ಹಿಟ್ ಅಂಡ್ ರನ್ ಕಾಯ್ದೆಯ ವಿರುದ್ಧ ಉತ್ತರ ಭಾರತದಲ್ಲಿ ಲಾರಿ ಮಾಲೀಕರು ಪ್ರತಿಭಟನೆ ನಡೆಸಿದ್ದರು.
ಈ ಬೆನ್ನಲ್ಲೇ ಕರ್ನಾಟಕದಲ್ಲೂ ಲಾರಿ ಮಾಲೀಕರು ಜನವರಿ.17ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಹಿಟ್ ಅಂಡ್ ರನ್ ಕೇಸ್ ಗೆ ಜೈಲು ಶಿಕ್ಷೆಯ ಅವಧಿಯನ್ನು ಹೆಚ್ಚಳ ಮಾಡಲಾಗುತ್ತಿದೆ. ದಂಡದ ಮೊತ್ತವನ್ನು ಭಾರೀ ಹೆಚ್ಚಳ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಹಿಟ್ ಅಂಡ್ ರನ್ ಕಾಯ್ದೆಯನ್ನು ಪರಿಷ್ಕರಣೆ ಮಾಡುವ ಮೂಲಕ ಲಾರಿ ಮಾಲೀಕರನ್ನು ಜೈಲಿಗಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ಲಾರಿ ಅಸೋಸಿಯೇಷನ್ ಗೌರವಾಧ್ಯಕ್ಷ ಚನ್ನಾರೆಡ್ಡಿ ಹೇಳಿದರು.
ಕಾನೂನು ಜಾರಿಗೆ ಮುಂದಾಗಿದ್ದನ್ನು ವಿರೋಧಿಸಿ ಉತ್ತರದ ಭಾರತದ ವಿವಿಧ ರಾಜ್ಯಗಳಲ್ಲಿ ಲಾರಿ ಮಾಲೀಕರು ಮುಷ್ಕರ ಕೈಗೊಂಡ ಬೆನ್ನಲ್ಲೇ ಕರ್ನಾಟಕದಲ್ಲೂ ಲಾರಿ ಮಾಲೀಕರು ಜನವರಿ.17ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮುಷ್ಕರದ ಸಂದರ್ಭದಲ್ಲಿ ಪೆಟ್ರೋಲಿಯಂ ಉತ್ಪನ್ನ, ಹಾಲು, ನೀರು ಪೂರೈಕೆ ಲಾರಿ ಹೊರತುಪಡಿಸಿ ಉಳಿದ ಸರಕು ಸಾಗಣೆ ಲಾರಿಗಳನ್ನು ಸ್ಥಗಿತಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!