ಉದಯವಾಹಿನಿ,ಕೋಲಾರ: ನಗರದ ಕಾರಂಜಿಕಟ್ಟೆ ಧರ್ಮರಾಯಸ್ವಾಮಿ ಆವರಣದಲ್ಲಿ ಕೋಲಾರ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ, ಜಿಲ್ಲಾ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ, ಜಿಲ್ಲಾ ಜೈನ್ ಸಂಘ, ಅಷ್ಟದಿಗ್ಗಜ ಜನಸೇವ ಪೌಂಡೇಶನ್, ಜಿಲ್ಲಾ ಕುರಿ ಸಾಕಣಿಕೆಗಾರರ ಮತ್ತು ಉಣ್ಣೆ ಸಂಸ್ಕರಣ ಕ್ರೆಡಿಟ್ ಕೋ-ಅಪರೆಟಿವ್ ಸೊಸೈಟಿ ಲಿ.ಇವರುಗಳ ಸಂಯುಕ್ತಾಶ್ರಯದಲ್ಲಿ ಗೋವುಗಳಿಗೆ ಪೂಜೆ ಹಾಗೂ ಮೇವು,ಎಳ್ಳು ಬೆಲ್ಲ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಗರಸಭೆ ಸದಸ್ಯ ಹಾಗೂ ನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎ.ಪ್ರಸಾದ್ ಬಾಬು ಮಾತನಾಡಿ ಭಾರತದಲ್ಲಿ ಸುಗ್ಗಿ ಹಬ್ಬವೆಂದೇ ಪರಿಸಣೆತವಾಗಿರುವ ಮಕರ ಸಂಕ್ರಾಂತಿಯನ್ನು ಜನವರಿ ಮದ್ಯಭಾಗದಲ್ಲಿ ಆಚರಿಸಲಾಗುತ್ತದೆ, ಮಕರ ಸಂಕ್ರಾಂತಿ ಹಿಂದೂಗಳ ಹಬ್ಬವನ್ನು ಕರ್ನಾಟಕದಲ್ಲಿ ಸುಗ್ಗಿ ಹಬ್ಬ, ತಮಿಳು ನಾಡಿನಲ್ಲಿ ಪೊಂಗಲ್,ಹರಿಯಾಣದಲ್ಲಿ ಸಕ್ರಾತ್,ಪಂಜಾಬಿನಲ್ಲಿ ಮಾಫಿ ಎಂದು ಕರೆಯುತ್ತಾರೆ ಇಂದು ನಮ್ಮ ಹಿಂದುಳಿದ ವರ್ಗಗಳ ವತಿಯಿಂದ ಗೋವುಗಳಿಗೆ ಪೂಜೆ ಹಾಗೂ ಮೇವುಎಳ್ಳಿ ಬೆಲ್ಲ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರಂಜಿಕಟ್ಟೆ ಧರ್ಮರಾಯಸ್ವಾಮಿ ಆವರಣದಲ್ಲಿ ಗೋವುಗಳಿಗೆ ಪೂಜೆ ಹಾಗೂ ಮೇವುಎಳ್ಳಿ ಬೆಲ್ಲ ವಿತರಣೆ ಕಾರ್ಯಕ್ರಮವನ್ನು ಮೊದಲ ಭಾರಿಗೆ ಪ್ರರಂಭಿಸಿದ್ದೇವೆ. ಮೂಂದಿನ ಈ ಕಾರ್ಯಕ್ರಮವನ್ನು ವಿಜೃಂಬನೆಯಿಂದ ಆಚರಿಸುತ್ತೇವೆ, ಈ ಹಬ್ಬ ಹಿಂದೂ ಧರ್ಮದಲ್ಲಿ ಸಂಕ್ರಾಂತಿ ಹಬ್ಬಕ್ಕೆ ಬಲು ಮಹತ್ವವಿದ್ದು ಮಕರ ಸಂಕ್ರಮಣದ ಸಂದರ್ಭದಲ್ಲಿ ಉತ್ತರಾಯಣ ಪುಣ್ಯಕಾಲ ಆರಭವಾಗುತ್ತದೆ, ಸೂರ್ಯನು ತನ್ನ ಪಥವನ್ನು ಬದಲಿಸುವ ದಿನದಂದು ಆಚರಿಸುವುದು ಸಂಪ್ರಾದಯವಾಗಿದೆ. ಈ ಹಬ್ಬದಂದು ಎಳ್ಳು-ಬೆಲ್ಲದಿಂದ ಮಾಡಿದ ಸಿಹಿತಿಂಡಿಗಳನ್ನು ಪರಸ್ಪರ ಹಂಚಿಕೊಂಡು,ಎಳ್ಳುಬೆಲ್ಲ ತಿಂದು ಒಳ್ಳೆಯಮಾತನಾಡುವ ಎಂದು ಹೇಳಿಕೊಳ್ಳುತ್ತಾರೆ. ಇದರ ಹಿಂದೆ ವೈಜ್ಞಾನಿಕ ಕಾರಣವು ಇದೆ. ಈ ಪದಾರ್ಥಗಳು ಶೀತ ಹವಾಮಾನದ ಸಂದರ್ಭದಲ್ಲಿ ಬೆಚ್ಚಗಾಗಿಸುತ್ತವೆ. ಜತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಾರಣವು ಇದೆ.

Leave a Reply

Your email address will not be published. Required fields are marked *

error: Content is protected !!