ಉದಯವಾಹಿನಿ, ಮಾಲೂರು: ನಗರದ ಹೊರವಲಯದ ಸಹ್ಯಾದ್ರಿ ಪದವಿ ಕಾಲೇಜಿನಲ್ಲಿ ಸಂಕ್ರಾಂತಿ ಸುಗ್ಗಿ ಹಬ್ಬವನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಎಂ.ಉದಯಕುಮಾರ್ ಉದ್ಘಾಟನೆ ನೆರವೇರಿಸಿ, ವಿದ್ಯಾರ್ಥಿಗಳನ್ನು ಕುರಿತು ಬರೀಪಾಠಗಳಿಗೆ ಸೀಮಿತರಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳುನಮ್ಮ ಮೂಲ ಸಂಸ್ಕೃತಿಯನ್ನು ಮರೆತು ಪಾಶ್ಚ್ಯಾತ್ಯ ಸಂಸ್ಕೃತಿಯ ಮೋರೆ ಹೋಗುತ್ತಿದ್ದಾರೆ. ಆದ್ದರಿಂದ ಇಂತಹ ಕಾರ್ಯಕ್ರಮಗಳಿಂದನಮ್ಮ ಮೂಲ ಸಂಸ್ಕೃತಿಗೆ ಮೆರಗು ಬರುತ್ತದೆ ಇದನ್ನ ವಿದ್ಯಾರ್ಥಿಗಳು ಉಳಿಸಿ ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆ ಬರದ ಹಾಗೆನೋಡಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯದರ್ಶಿ ಕುಲಕರ್ಣಿ ಮಾತನಾಡಿ, ಇದು ರೈತರ ಹಬ್ಬ. ರೈತರು ಬೆಳೆದ ಬೆಳೆಗಳನ್ನು ಕಣಗಳಲ್ಲಿಗುಡ್ಡೆ ಹಾಕಿ ರಾಸುಗಳಿಗೆ ಮತ್ತು ಗುಡ್ಡಗಳಿಗೆ ಒಟ್ಟಾಗಿ ಪೂಜಿಸುವ ಕೆಲಸ ಹಿಂದೂಧರ್ಮದಲ್ಲಿ ಸಂಪ್ರದಾಯ ಬದ್ಧವಾಗಿ ನಡೆದುಕೊಂಡು ಬಂದಿದೆ ಸಕಾಲಕ್ಕೆ ಮಳೆ ಬೆಳೆ ಚೆನ್ನಾಗಿ ಆಗಲೆಂದು ಈ ಹಬ್ಬವನ್ನು ಆಚರಿಸುತ್ತಿದ್ದರು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕ ಸಂತೂರಾಮ್ಸಿಂಗ್ಸ್ವಾಗತಿಸಿದರು, ಎಲ್ಲಾ ಉಪನ್ಯಾಸಕರು, ಭೋದಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
