ಉದಯವಾಹಿನಿ, ಕಲಬುರಗಿ: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಸತೀಶಕುಮಾರ ವೆಂಕಟರೆಡ್ಡಿ ಅಲಿಯಾಸ್ ಮಾರ್ಕೆಟ್ ಸತ್ಯಾ ( 36) ಹಾಗೂ ಅಫಜಲಪುರ ತಾಲೂಕಿನ ಬಳೂರಗಿ ಗ್ರಾಮದ ಅಪ್ಪುಶಾ ಅಲಿಯಾಸ್ ಬಂಡಯ್ಯಾ ಸಾತಲಿಂಗಯ್ಯ ಮಠಪತಿ ( 30) ಎಂಬುವವರಿಗೆ ಇಲ್ಲಿನ 3 ನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ತಲಾ 2 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿದೆ.
2016 ರ ಮೇ4 ರಂದು ಲಾಕಪ್ ಗಾರ್ಡ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಅವಾಚ್ಯಶಬ್ದಗಳಿಂದ ಬೈಯ್ದು, ನಂತರ ಹೆಡ್ ಕಾನ್‍ಸ್ಟೆಬಲ್ ಕುತ್ತಿಗೆ ಹಿಚುಕಿ ಕೊಲೆ ಮಾಡಲು ಪ್ರಯತ್ನಿಸಿದ್ದರು. ತಪ್ಪಿಸಿಕೊಂಡು ಓಡಿಹೋಗುವಾಗ ಪೊಲೀಸ್ ಠಾಣೆಯ ಬಾಗಿಲು ಬಡಿದದ್ದರಿಂದ ಆರೋಪಿಗಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು.
ಈ ಕುರಿತು ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ಆರೋಪಿಗಳ ವಿರುದ್ಧ ದೂರು ನೀಡಿದ್ದರು.ಈ ಕುರಿತು ಪ್ರಕರಣ ದಾಖಲಿಸಿ ಕೊಂಡಿದ್ದ ಪೊಲೀಸ್ ಇನ್‍ಸ್ಪೆಕ್ಟರ್ ರಾಜಶೇಖರ ಹಳಿಗೋದಿ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
