ಉದಯವಾಹಿನಿ, ಬೀದರ್: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಹಿರೇಮಠಕ್ಕೆ ರವಿವಾರ ಬೆಳಗ್ಗೆ ಶ್ರೀ ಹನುಮ ಜನ್ಮ ಭೂಮಿ ಕಿಷ್ಕಿಂದೆ ಯಿಂದ ಸೈಕಲ್ ಯಾತ್ರೆ ಮೂಲಕ ಶ್ರೀರಾಮನ ಜನ್ಮಭೂಮಿ ಅಯೋಧ್ಯಗೆ ತೆರಳುತ್ತಿರುವ ಬಿಜಾಪುರ ಜಿಲ್ಲೆಯ ತಳೇವಾಡ ಗ್ರಾಮದ ಸುರೇಶ ಬಿ ಕೋಟೆಗೊಂಡ ಅವರನ್ನು ಹಾರ ಕೂಡ ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ. ಚನ್ನವೀರ ಶಿವಾಚಾರ್ಯರು ಸತ್ಕರಿಸಿ, ಸಹಾಯಧನ ನೀಡಿ ಯಾತ್ರೆಗೆ ಶುಭ ಹಾರೈಸಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಸಿದ್ರಾಮಪ್ಪ ಗುದಗೆ ಹಾರಕೂಡ, ರತಿಕಾಂತ ಕೋಹಿನೂರ, ಪಂಡಿತರಾವ ದೇಗಾಂವ, ವಿಜಯಕುಮಾರ ಜಮಾದಾರ, ಚನ್ನಬಸಪ್ಪ ಕನಕಪೂರ, ಅಪ್ಪಣ್ಣ ಜನವಾಡ, ಬಸವರಾಜ ಪೂಜಾರಿ, ತಾನಾಜಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
