ಉದಯವಾಹಿನಿ, ಕೋಲಾರ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗೋವುಗಳಿಗೆ ಪೂಜೆ ಮಾಡಿ, ಬಡಾವಣೆಯ ಮಕ್ಕಳಿಗೆ, ಜನತೆಗೆ ಎಳ್ಳು-ಬೆಲ್ಲ ವಿತರಿಸುವ ಮೂಲಕ ನಗರದ ಟೇಕಲ್ ಮುಖ್ಯ ರಸ್ತೆಯ ರೇಣುಕಾ ಯಲ್ಲಮ್ಮ ದೇವಸ್ಥಾನದ ಹಿಂಭಾಗದ ೧ ನೇ ಅಡ್ಡ ರಸ್ತೆಯ ನಿವಾಸಿಗಳು ಸಂಭ್ರಮಿಸಿದರು.
ಮಹಿಳೆಯರು ಮತ್ತು ಶಿಕ್ಷಕಿಯರು ಸೇರಿ ಸುಮಿತ್ರಮ್ಮ ಅವರ ಮನೆಯ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಂಕ್ರಾಂತಿ ಹಬ್ಬವನು ಮಕ್ಕಳನ್ನು ಕರೆದು ಮನೆಯ ಮುಂದೆ ಕೂರಿಸಿ ಅಲ್ಲಿನ ಸುತ್ತ ಮುತ್ತಲ್ಲಿನ ಮಹಿಳೆಯರನ್ನು ಕರೆದು ಅವರಿಗೆ ಅರಶಿಣ ಕುಂಕುಮ ಕೊಟ್ಟು ಮತ್ತು ಮಕ್ಕಳಿಗೆ ಎಳ್ಳು ಬೆಲ್ಲ ಮತ್ತು ಕಬ್ಬು ನೀಡಿ ಎಲ್ಲರಿಗೂ ಈ ಸಂಕ್ರಾಂತಿ ಹಬ್ಬದಂದು ಒಳ್ಳೆಯಾದಾಗಲಿ ಎಂದು ಹೇಳಿದರು.
ನಂತರ ಸಂಕ್ರಾಂತಿ ಹಬ್ಬದಲ್ಲಿ ಮಹಿಳೆಯರು ಮತ್ತು ಶಿಕ್ಷಕಿಯರಿಂದ ದೇವರ ಹಾಡುಗಳು ಹಾಡುತ್ತ ಮಕ್ಕಳಿಗೂ ಹೇಳಿ ಕೊಡುತ್ತಾ ಮನೋರಂಜನೆ ನೀಡಿದರು, ಸುತ್ತ ಮುತ್ತಲ್ಲಿನ ಮಹಿಳೆಯರು ಮತ್ತು ಮಕ್ಕಳು ಸೇರಿ ಸುಗ್ಗಿಯ ಸಂಭ್ರಮ ಆಚರಣೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಸುಮಿತ್ರಮ್ಮ, ಮಂಜುಳಮ್ಮ, ಶೋಭಮ್ಮ, ಗಂಗಮ್ಮ, ರಾಜಮ್ಮ, ಶಾಲಿನಿ, ರೂಪ, ಸರಸ್ವತಿ, ಶಿರಿಷಾ, ರತ್ನಮಾಲಾ, ಬುಜ್ಜಿ, ಅರ್ಚನಾ, ಇನ್ನು ಅನೇಕ ಮಹಿಳೆಯರು ಮತ್ತು ಪುಟಾಣಿ ಮಕ್ಕಳು ಸೇರಿ ಹೊಸ ವರುಷದ ಸುಗ್ಗಿ ಹಬ್ಬಕ್ಕೆ ಎಲ್ಲರಿಗೂ ಶುಭ ಕೋರಿ ಹಾರೈಸಿದರು.
