ಉದಯವಾಹಿನಿ, ಬಂಗಾರಪೇಟೆ: ಹಾಲು ಒಕ್ಕೂಟದ ಆಕ್ರಮ ನೇಮಕಾತಿಯಲ್ಲಿ ಆಯ್ಕೆ ಆಗಿರುವ ಆಭ್ಯರ್ಥಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಒಕ್ಕೂಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ವಿಶೇಷ ತಂಡ ರಚನೆ ಮಾಡುವಂತೆ ಜ.೧೯ ರ ಶುಕ್ರವಾರ ಹಾಲಿನ ಸಮೇತ ಒಕ್ಕೂಟ ಮುತ್ತಿಗೆ ಹಾಕಲು ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಹಾಲು ಒಕ್ಕೂಟವನ್ನು ಹರಾಜಿಗಿಟ್ಟು ಅದ್ಯಕ್ಷರಿಗೆ ನಿರ್ದೇಶಕರಿಗೆ ವ್ಯವಸ್ಥಾಪಕರಿಗೆ ಕೋಟಿ ಕೋಟಿ ಲಂಚದ ದಾರಿ ಹೇಳಿಕೊಡುವ ಅಡ್ಮಿನ್ ನಾಗೇಶ್ ರವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಆಸ್ತಿಯನ್ನು ಹರಾಜು ಹಾಕಿದರೆ ಒಕ್ಕೂಟದ ಲಕ್ಷಾಂತರ ರೈತರ ಒಂದು ತಿಂಗಳ ಹಾಲಿನ ಬಟವಾಡವನ್ನು ನೀಡಬಹುದು ಅಷ್ಟೊಂದು ಆಕ್ರಮ ಆಸ್ತಿಯನ್ನು ಸಂಪಾಂದನೆ ಮಾಡಿದ್ದಾನೆಂದು ರಾಜ್ಯ ಕಾರ್ಯದರ್ಶಿ ಬಂಗಾರಿ ಮಂಜು ಗಂಭೀರ ಆರೋಪ ಮಾಡಿದರು.
ಹಸು ಖರೀದಿ ಮಾಡಿಲ್ಲ, ಸಗಣಿ ಬಾಚಿಲ್ಲ ಗಂಜಲ ವಾಸನೆ ನೋಡಿಲ್ಲ ಆದರೂ ಲಕ್ಷಾಂತರ ರೈತರ ಹೆಸರಿನಲ್ಲಿ ಶೋಕಿ ಮಾಡಲು ಹೊರಟಿರುವ ಅದ್ಯಕ್ಷರು ಹಾಗೂ ನಿರ್ದೇಶಕರು ಆಡಳಿತ ಮಂಡಳಿಗೆ ನಾಚಿಕೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಸವಾಲು ಹಾಕಿದರು.
ಒಂದು ಕಡೆ ಒಕ್ಕೂಟದ ಅಭಿವೃದ್ದಿ ಹೆಸರಿನಲ್ಲಿ ರೈತರಿಗೆ ನೀಡಿರುವ ಹಾಲಿನ ದರ ೧ರೂ. ಕಡಿತ ಮಾಡಿದರೆ ಮತ್ತೊಂದು ಕಡೆ ಪಶು ಆಹಾರವನ್ನು ೫೦ ರೂ ಏರಿಕೆ ಮಾಡಿ ಅದರಲ್ಲೂ ಲೂಟಿ ಮಾಡುವ ಜೊತೆಗೆ ಬಿ.ಎಂ.ಸಿಗಳಲ್ಲಿ ಕಲಬೆರಕೆ ಹಾಲಿನ ದಂದೆ ಮತ್ತು ಒಕ್ಕೂಟದ ಗುತ್ತಿಗೆ ಕಾರ್ಮಿಕರಿಂದ ಹಿಡಿದು ಮಾರುಕಟ್ಟೆಯವರೆಗೂ ಹೆಜ್ಜೆ ಹೆಜ್ಜೆಗೂ ರೈತರ ಬೆವರಿನ ಸಗಣಿಯನ್ನು ತಿನ್ನುವ ಆಡಳಿತ ಮಂಡಳಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲದೆ ಬಿಳಿ ಬಟ್ಟೆ ಹಾಕಿಕೊಂಡು ಎ.ಸಿ ಕಾರಿನಲ್ಲಿ ರೈತರ ತೆರಿಗೆ ಹಣ ಕೋಟಿ ಕೋಟಿ ಲೂಟಿ ಮಾಡುತ್ತಿದ್ದಾರೆಂದು ಗಂಬೀರ ಆರೋಪಿಸಿದ್ದಾರೆ.
