ಉದಯವಾಹಿನಿ, ಲಿಂಗಸುಗೂರ : ಪೋಲಿಸರಿಂದ ಬೈಕ್ ಕಳ್ಳನ ಬಂಧನ ಸಾರ್ವಜನಿಕರಿಂದ ಪೊಲೀಸರ ಕರ್ತವ್ಯ ಪ್ರಶಂಸೆ. ಲಿಂಗಸುಗೂರ ಪಟ್ಟಣದಲ್ಲಿ ದಿ.೦೭-೦೬-೨೦೨೩ ರಂದು ಬೆಳಿಗ್ಗೆ ೧೧-೦೦ ಗಂಟೆಗೆ ಪೆಟ್ರೋಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಅನುಮಾನಾಸ್ಪದ ವಾಹನಗಳ ತಪಾಸಣೆಯಲ್ಲಿ ತೊಡಗಿದ್ದಾಗ ಲಿಂಗಸುಗೂರು ಪಟ್ಟಣದ ಮಸ್ಕಿ ಬೈಪಾಸ್ ರಸ್ತೆಯ ಕ್ಯಾಥೋಲಿಕ್ ಚರ್ಚ್ ಹತ್ತಿರ ಒಬ್ಬ ವ್ಯಕ್ತಿಯು ಒಂದು ಮೋಟಾರ್ ಸೈಕಲ್ ತೆಗೆದುಕೊಂಡು ಬಂದಾಗ ಅವನ ಮೋಟಾರ್ ಸೈಕಲ್ ನಿಲ್ಲಿಸಿ ವಾಹನದ ದಾಖಲಾತಿಗಳನ್ನು ಕೇಳಿ ವಿಚಾರಿಸಿದಾಗ ಸದರಿ ವ್ಯಕ್ತಿಯು ಯಾವುದೇ ದಾಖಲಾತಿಗಳನ್ನು ಹಾಜರು ಪಡಿಸದೇ ಹಾಗೂ ವಾಹನಕ್ಕೆ ಯಾವುದೇ ನಂಬರ್ ಪ್ಲೇಟ್ ಅಳವಡಿಸದೇ ಇರುವುದು ಕಂಡು ಬಂದಿದ್ದರಿಂದ ಸದರಿ ವಾಹನದ ಚಾಲಕನಿಗೆ ಪ್ರಶ್ನಾವಳಿ ಮಾಡಿ ವಿಚಾರಿಸಿದಾಗ ಅವನು ತಪ್ಪು ತಪ್ಪಾದ ಮಾಹಿತಿಯನ್ನು ನೀಡಿದ್ದರಿಂದ ಅವನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದಾಗ ಸದರಿ ವ್ಯಕ್ತಿಯು ತಾನು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್ ಕಳುವು ಮಾಡಿದ್ದ ಮೋಟಾರ್ ಸೈಕಲ್ ಅಂತಾ ಗೊತ್ತಾಗಿದ್ದರಿಂದ ಸದರಿಯವನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಸದರಿಯವನು ತಾನು ಇದೇ ರೀತಿ ಇನ್ನೂ ೧೩ ಮೋಟಾರ್ ಸೈಕಲ್‌ಗಳನ್ನು ಮುದಗಲ್, ನಾರಾಯಣಪೂರ, ಇಲಕಲ್, ನಾಲತವಾಡ, ಹುನಗುಂದ ಹಾಗೂ ಮುದ್ದೇಬಿಹಾಳ ಠಾಣಾ ವ್ಯಾಪ್ತಿಗಳಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ಕಳುವು ಮಾಡಿ ಮಾರಾಟ ಮಾಡಿರುವುದಾಗಿ ಹಾಗೂಬೇರೆ ಬೇರೆ ಸ್ಥಳಗಳಲ್ಲಿ ಬೈಕ್‌ಗಳನ್ನು ಬಚ್ಚಿಟ್ಟಿರುವುದು ಬೈಕ ಕಳ್ಳನಿಂದ ಒಟ್ಟು ೧೪ ವಿವಿಧ ಕಂಪನಿಗಳ ಮೋಟಾರ್ ಬೈಕ್‌ಗಳು ವಶಪಡಿಸಿ ಸುಮಾರು ಒಟ್ಟು .ರೂ ೫,೬೦,೦೦೦/- ರೂ ಬೆಲೆ ಬಾಳುವ ಬೈಕ್‌ಗಳನ್ನು ಜಪ್ತಿ ಮಾಡಿಕೊಂಡಿದ್ದು ಬೈಕ್ ಕಳ್ಳನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!