ಉದಯವಾಹಿನಿ, ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅಕ್ರಮ ಶೆಡ್, ಮನೆ ತೆರವು ಪ್ರಕರಣದಲ್ಲಿ ಅಲ್ಲಿನ ನಿವಾಸಿಗಳ ಪೌರತ್ವದ ಬಗ್ಗೆ NIA ತನಿಖೆ ಆಗಬೇಕು ಅಂತ ರಾಜ್ಯ ಸರ್ಕಾರಕ್ಕೆ ಬಿಜೆಪಿ ಆಗ್ರಹಿಸಿದೆ. ವಿಪಕ್ಷ ನಾಯಕ ಅಶೋಕ್ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ರು. ನಿವಾಸಿಗಳ ದಾಖಲಾತಿ ಪರಿಶೀಲನೆ ಮಾಡಿದ್ರು. ನಿವಾಸಿಗಳು ಜೊತೆ ಮಾತಾಡಿ ಮಾಹಿತಿ ಕಲೆ ಹಾಕಿದ್ರು. ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ನೇತೃತ್ವದ ಟೋಪಿ ಸರ್ಕಾರ. ಕನ್ನಡಿಗರಿಗೆ ಟೋಪಿ ಹಾಕಿ ಮಿನಿ ಬಾಂಗ್ಲಾದೇಶ ಮಾಡಿದೆ. ಕರ್ನಾಟಕ ಮಿನಿ ಬಾಂಗ್ಲಾದೇಶ ಹಬ್ ಆಗಿದೆ. ಬೇರೆ ಬೇರೆ ರಾಜ್ಯದಿಂದ ಜನರು ಇಲ್ಲಿಗೆ ಬಂದಿದ್ದಾರೆ. 25 ವರ್ಷಗಳಿಂದ ಇದ್ದೀವಿ ಅಂತಾರೆ. ಇದು ಸಾಧ್ಯನಾ? ನಾವು ಇವತ್ತು ಬರುತ್ತೇವೆ ಅಂತ ಇಲ್ಲಿ ಇದ್ದವರನ್ನ ಹೊರಗೆ ಕಳಿಸಿದ್ದಾರೆ. ಟ್ಯಾನಿ ರೋಡ್ ಆ ಕಡೆ ಈ ಕಡೆಯಿಂದ ಕರೆದುಕೊಂಡು ಬಂದು ನಿಲ್ಲಿಸಿದ್ದಾರೆ ಅಂತ ಆರೋಪ ಮಾಡಿದ್ರು.
ಇವರು ಯಾವಾಗ ಬಂದರು? ಎಲ್ಲಿಂದ ಬಂದರು ಅಂತ ಮಾಹಿತಿ ಇದೆ.
ಒಂದು ವರ್ಷದ ಹಿಂದೆ ಯಾರು ಇರಲಿಲ್ಲ. ಈಗ ಇಲ್ಲಿ ಮನೆಗಳು ಇವೆ. ಡಿಕೆ ಶಿವಕುಮಾರ್ ಅವರು ಅಕ್ರಮ ಮನೆ ಒಡೆದು ಹಾಕ್ತೀವಿ ಅಂದರು. ಕರ್ನಾಟಕದಲ್ಲಿನ ಕನ್ನಡದ ಜನರಿಗೆ ಇವರು ಕರೆಂಟ್ ಕೊಡೋಕೆ ಆಗಿಲ್ಲ ಇವರಿಂದ. ಇವರಿಗೆ ಕರೆಂಟ್ ಕೊಟ್ಟಿದ್ದಾರೆ. ಇವೆರೇನು ಸಿದ್ದರಾಮಯ್ಯ ಮನೆಯವರ. ಇದನ್ನ ಮಿನಿ ಬಾಂಗ್ಲಾದೇಶ ಮಾಡಿದ್ದಾರೆ. ಡ್ರಗ್ಸ್ ರಾಜ್ಯ ಆಗ್ತಿದೆ ಕರ್ನಾಟಕ. ಪೊಲೀಸರು ಡ್ರಗ್ಸ್ ಕೇಸ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ದಿನಾ ಒದೊಂದು ಕಾಲೋನಿಯಲ್ಲಿ ಬಾಂಗ್ಲಾದೇಶ ಹುಟ್ಟುತ್ತಿದೆ ಅಂತ ಆರೋಪ ಮಾಡಿದ್ರು.
