ಉದಯವಾಹಿನಿ, ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಡ್ರಿಂಕ್ಸ್ ಮಾಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ ಎಂದು ಗೃಹ ಪರಮೇಶ್ವರ್ ಸ್ಪಷ್ಟನೆ ಕೊಟ್ಟಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತುಂಬಾ ಕುಡಿದಿರುವವರು, ನಡೆಯಲು ಆಗದಿರುವವರನ್ನ ವಿಶ್ರಾಂತಿ ಸ್ಥಳಕ್ಕೆ ಬಿಡುತ್ತೇವೆ. ಕೆಲವರು ಪ್ರಜ್ಞೆ ಇರದ ಮಟ್ಟಕ್ಕೆ ಹೋಗಿ ಬಿಡ್ತಾರೆ. 15 ಕಡೆ ರೆಸ್ಟಿಂಗ್ ಪ್ಲೇಸ್ ಮಾಡಿದ್ದೇವೆ. ನಶೆ ಇಳಿಯುವವರೆಗೂ ಇಟ್ಟುಕೊಂಡು ನಂತರ ಕಳಿಸುತ್ತೇವೆ ಎಂದು ತಿಳಿಸಿದ್ದಾರೆ. ಇನ್ನೂ ಡ್ರಿಂಕ್ ಆಂಡ್ ಡ್ರೈವ್‌ಗೆ ಅದೇ ರೀತಿಯಲ್ಲಿ ಕೇಸ್ ಇರುತ್ತೆ. 160 ಸ್ಪಾಟ್ ಐಡೆಂಟಿಫೈ ಮಾಡಿದ್ದಾರೆ. ಒಂದು ಹಂತದವರೆಗೆ ಬಿಡುತ್ತೇವೆ. ಹಂತ ಮೀರಿದಾಗ ಡ್ರೈವ್ ಮಾಡೋದು ಕಷ್ಟವಾಗುತ್ತೆ, ಆಗ ಅಪಘಾತವಾಗಿ ತಾವು ಸಾಯ್ತಾರೆ, ಬೇರೆಯವರನ್ನು ಸಾಯಿಸುತ್ತಾರೆ. ಎರಡು ದಿನ ನಾವು ಕಂಟ್ರೋಲ್ ಮಾಡಿದ್ರೆ ಕೆಲವರ ಪ್ರಾಣ ಉಳಿಯುತ್ತವೆ ಎಂದಿದ್ದಾರೆ.
ಹೆಚ್ಚು ಜನರು ಸೇರಿದಾಗ ಬೇರೆ ಆಯಾಮದಲ್ಲಿ ನೋಡಬೇಕಾಗುತ್ತೆ. ಟೆರೆರಿಸ್ಟ್ ಆಯಾಮದಲ್ಲಿ ನೋಡಬೇಕಾಗುತ್ತೆ. ಎಲ್ಲ ಆಯಾಮದಲ್ಲಿ ಪೊಲೀಸರು ಕ್ರಮ ತೆಗೆದುಕೊಳ್ಳಲಿದ್ದಾರೆ. ಪೊಲೀಸ್ ಅವರಿಗೆ ಬಾಡಿ ಕ್ಯಾಮರಾ ಹಾಕಲು ಹೇಳಿದ್ದೇವೆ. ಡೈರೆಕ್ಟ್ ಆಗಿ ಕಮಾಂಡ್ ಸೆಂಟರ್‌ಗೆ ಕನೆಕ್ಟ್ ಆಗಿರುತ್ತೆ. ಹೆಚ್ಚಿನ ಪೋರ್ಸ್ ಬೇಕಾದರೆ ಆ ಸ್ಥಳಕ್ಕೆ ಬರುತ್ತೆ ಎಂದು ಮಾಹಿತಿ ನೀಡಿದ್ದಾರೆ.
