ಉದಯವಾಹಿನಿ,ಮೇಲುಕೋಟೆ: ಶ್ರೀಕ್ಷೇತ್ರ ಮೇಲುಕೋಟೆ ಯೋಗನರಸಿಂಹ ಸ್ವಾಮಿ ದೇವಸ್ಥಾನದ ಚಿಕ್ಕ ಗೋಪುರದಲ್ಲಿ ಶುಕ್ರವಾರ ‘ವಡಗಲೆ ನಾಮ’ ತೆಗೆದು ‘ತೆಂಗಲೆ ನಾಮ’ ಹಾಕಲಾಯಿತು.
‘ನಾಮ ಬದಲಾವಣೆ ಕುರಿತು 1973ರಿಂದಲೂ ವ್ಯಾಜ್ಯ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ವಡಗಲೆ ನಾಮದ ಬದಲು ತೆಂಗಲೆ ನಾಮ ಹಾಕುವಂತೆ ಆದೇಶವಾಗಿರುವ ಕಾರಣ ಧಾರ್ಮಿಕ ದತ್ತಿ ಇಲಾಖೆ, ಮುಜರಾಯಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಾಮ ಬದಲಾವಣೆ ಮಾಡಲಾಗಿದೆ’ ಎಂದು ದೇವಾಲಯದ ಸಿಬ್ಬಂದಿ ತಿಳಿಸಿದರು.
‘1970ರಲ್ಲಿ ಚಿಕ್ಕ ಗೋಪುರ ನಿರ್ಮಾಣದ ವೇಳೆ ತೆಂಗಲೆ ನಾಮ ಬದಲಾವಣೆ ಮಾಡಿ ವಡಗಲೆ ನಾಮ ಬರೆಯಲಾಗಿತ್ತು. ಸ್ಥಳೀಯ ಸಂಪ್ರದಾಯದಂತೆ ತೆಂಗಲೆ ನಾಮ ತೆಗೆಯುವಂತೆ ಹೈಕೋರ್ಟ್‌ ಆದೇಶ ನೀಡಿರುವ ಹಿನ್ನೆಲೆಯಲ್ಲಿ ತೆಂಗಲೆ ನಾಮ ಬರೆಯಲಾಗಿದೆ’ ಎಂದರು.

Leave a Reply

Your email address will not be published. Required fields are marked *

error: Content is protected !!