ಉದಯವಾಹಿನಿ, ಹಲಗೂರು: ಸಮೀಪದ ಮುತ್ತತ್ತಿ ಅಂಜನೇಯ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಗಣರಾಜ್ಯೋತ್ಸವ ದ ಅಂಗವಾಗಿ ಅಂಜನೇತ ಮೂರ್ತಿಗೆ ತ್ರಿವರ್ಣ ಧ್ವಜವನ್ನು ಹೋಲುವ ರೀತಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಹೂವುಗಳಿಂದ ಆಕರ್ಷಕವಾಗಿ ಆಲಂಕಾರ ಮಾಡಲಾಗಿದ್ದು, ನಡುವೆ ಅಶೋಕ ಚಕ್ರವನ್ನು ಚಿತ್ರಿಸಲಾಗಿತ್ತು. ದೇವರ ಹೂವಿನ ಆಲಂಕಾರ ಭಕ್ತಾಧಿಗಳ ಕಣ್ಮನ ಸೆಳೆಯಿತು.ಮೂರು ದಿನಗಳ ಕಾಲ ನಿರಂತರ ರಜೆಯ ಹಿನ್ನೆಲೆಯಲ್ಲಿ ಭಕ್ತಾಧಿಗಳು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಇಂದು ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವ ಆಚರಣೆಯ ಹಿನ್ನಲೆಯಲ್ಲಿ ದೇವರ ಮೂರ್ತಿಗೆ ವಿಶೇಷ ಹೂವಿನ ಆಲಂಕಾರ ಮಾಡಲಾಗಿದೆ ಎಂದು ಅರ್ಚಕ ಶ್ರೀಕಾಂತ್ ತಿಳಿಸಿದರು.
