
ಉದಯವಾಹಿನಿ,ಶಿಡ್ಲಘಟ್ಟ: ತಾಲೂಕಿನ ಹಂಡಿಗನಾಳ ಗ್ರಾಮ ಪಂಚಾಯತಿಯ ಎಲ್ ಮುತ್ತಕದಹಳ್ಳಿ ಗ್ರಾಮದಲ್ಲಿ ನಡೆದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಧ್ಯಕ್ಷರಾಗಿ ದೇವಪ್ಪ ಉಪಾಧ್ಯಕ್ಷರಾಗಿ ಎಂ.ಸಿ ಮೂರ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ದೇವಪ್ಪ ಮಾತನಾಡಿ, ಸ್ಥಳೀಯ ರೈತರ ಜೀವನ ಮಟ್ಟ ಮತ್ತು ಅವರ ಆರ್ಥಿಕ ಸುಧಾರಣೆಗೆ ಹೈನುಗಾರಿಕೆ ಸಂಜೀವಿನಿಯಾಗಿದೆ. ರೈತರು ಉತ್ತಮ ತಳಿಯ ಹಸುಗಳನ್ನು ಸಾಕುವುದರ ಜೊತೆಗೆ ಹೈನುಗಾರಿಕೆಯಲ್ಲಿ ಆಧುನಿಕ ತಾಂತ್ರಿಕತೆ ಅಳವಡಿಸಿಕೊಂಡು ಹೆಚ್ಚಿನ ಲಾಭ ಪಡೆಯಬಹುದು. ಎಲ್ಲಾ ಸದಸ್ಯರ ಒಮ್ಮತದಿಂದ ಡೈರಿಯನ್ನು ಉತ್ತಮ ಮಟ್ಟದಲ್ಲಿ ನಿರ್ವಹಿಸಿಕೊಂಡು ಹೋವುತ್ತೇವೆ ಎಂದು ಹೇಳಿದರು.ಆಯ್ಕೆಯಾದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ನೂತನ ನಿರ್ದೇಶಕರಗಳಾದ ಮುನಿಕೃಷ್ಣ, ಮಹೇಶ್, ಪ್ರಕಾಶ್, ಗಂಗಾಧರ್ , ಸರೋಜಮ್ಮ, ಸುಬ್ಬಣ್ಣ ರವರನ್ನು ಶಾಸಕ ಬಿ,ಎನ್ ರವಿಕುಮಾರ್ ಅಭಿನಂದಿಸಿ ಸಹಕಾರ ಸಂಘದ ನಿರ್ದೇಶಕರನ್ನು ಒಗ್ಗೂಡಿಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ, ಹಾಲು ಉತ್ಪಾದಕರಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಲಕ್ಷ್ಮಿ ನಾರಾಯಣರೆಡ್ಡಿ, ಗ್ರಾಮದ ಮುಖಂಡರಾದ ಬೈರೇಗೌಡ, ರಾಮರೆಡ್ಡಿ, ದೇವರಾಜ್, ಪ್ರಶಾಂತ್, ಶಶಿಧರ್, ಸಂತೋಷ್, ನಾಗರಾಜ್, ಕೃಷ್ಣ, ವೆಂಕಟೇಶ ಹಾಗೂ ಎಲ್ ಮುತ್ತಕದಹಳ್ಳಿ ಮತ್ತು ಪೈಲಹಳ್ಳಿಯ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು.
