ಉದಯವಾಹಿನಿ, ವಿಜಯಪುರ: ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಜಿಲ್ಲೆಯ ಕದಳಿವೇದಿಕೆಯ ಅಧ್ಯಕ್ಷರಾಗಿ ಸ್ವರ್ಣಗೌರಿ ಮಹದೇವರವರಿಗೆ “ಸೇವಾದೀಕ್ಷಾ ಪತ್ರ “ನೀಡಿಲಾಯಿತು.
ವಿಜಯಪುರ ಪಟ್ಟಣದ ಮಹದೇವ್‌ರವರ ಮನೆಯಲ್ಲಿ ನಡೆದ ಕಾರ್ಯಕ್ರಮಲ್ಲಿ ಜಿಲ್ಲೆಯ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ್‌ರವರು ಆದೇಶದ ಪ್ರತಿ ನೀಡಿ, ಮಾತನಾಡುತ್ತಾ, ಶರಣ ಸಾಹಿತ್ಯ ಪರಿಷತ್ತಿನ ಶರಣ ಚಿಂತನೆಗಳು ಇಂದಿನ ಆಧುನಿಕ ತಲ್ಲಣಗಳಿಗೆ ಸಾಂತ್ವನ ನೀಡುವ ಅಮೃತ. ಹಾಗಾಗಿ ಪ್ರತಿ ಮನೆಯಲ್ಲಿ ಶರಣ ಸಾಹಿತ್ಯ ಪ್ರಚಾರದ ಅಗತ್ಯವಿದೆ. ಸುತ್ತೂರ ಶ್ರೀಗಳ ಆಶೀರ್ವಾದ, ಆಶಯ ನಿಮ್ಮ ಜೊತೆಗಿದೆ. ಇಡೀ ಜಿಲ್ಲೆಯ ಮಹಿಳೆಯರ ಸಹಕಾರ ಪಡೆದು, ಅದ್ಭುತ ಕಾರ್ಯ ನಿರ್ವಾಹಕರಾಗಬೇಕು ಎಂದರು.
ಆದೇಶ ಪತ್ರ ಸ್ವೀಕರಿಸಿದ ಸ್ವರ್ಣಗೌರಿ ಮಹದೇವ್‌ರವರು ಮಾತನಾಡಿ, ಜರಗನಹಳ್ಳಿ ಶಿವಶಂಕರ ಕಾಲದಿಂದಲೂ ತಮ್ಮ ಹಂಬಲ, ತುಡಿತ ಕದಳಿವೇದಿಕೆಯ ಸಬಲೀಕರಣವಾಗಿದ್ದು, ಅದನು ಇನ್ನು ಮುಂದೆ ಹೊಸಕೋಟೆಯ ನಿಕಟಪೂರ್ವ ಅಧ್ಯಕ್ಷರಾದ ಕರುಣಾ, ತಾಲ್ಲೂಕಿನ ಅಧ್ಯಕ್ಷ ರಾಜಮ್ಮ, ದೇವನಹಳ್ಳಿಯ ರೂಪ ಭಾಸ್ಕರ, ದೊಡ್ಡಬಳ್ಳಾಪುರದ ಲತಾ ಆರಾಧ್ಯ, ನೆಲಮಂಗಲ ತಾಲ್ಲೂಕಿನ ಜಗದಂಭಾರವರ ಸಹಕಾರದಿಂದ ಸಕಾರಾತ್ಮಕ ಕಾರ್ಯ ನಿರ್ವಹಿಸುವೆ ವಿಶೇಷವಾಗಿ ಎಲ್ಲಾ ಶರಣರ ಸಹಕಾರ ಬೇಕು ಎಂದು ತಿಳಿಸಿದರು.
ಸ್ವರ್ಣಗೌರಿ ಮಹದೇವ್‌ರವರ ಹಿರಿಯರಾದ ಎ ವಿ ಅಪ್ಪಯ್ಯಣ್ಣ ಮತ್ತು ನಂಜಮ್ಮ ನವರ ಸ್ಮರಣಾರ್ಥ ೨೫೦೦೦/ರೂ ಗಳ ದತ್ತಿ ನೀಡಿದರು.
ಕಾರ್ಯಕ್ರಮ ಕುರಿತು ಕರ್ನಾಟಕ ಮಿತ್ರ ಸಂಘದ ಅಧ್ಯಕ್ಷ ಚಿ ಮಾ ಸುಧಾಕರ್ ಮಾತನಾಡಿ, ಸ್ವರ್ಣಗೌರಿಯವರು ನಾಡಿನ ಮಹಿಳೆಯರ ಪಾಲಿನ ಸರಸ್ವತಿಯಹಾಗೆ ಅವರು ಕದಳಿವೇದಿಕೆಯ ನ್ನು ವೈಚಾರಿಕ ಮಾಗಿ ಮುನ್ನೆಡಸಬೇಕು ಎಂದರು.
ಮಹದೇವ ಪ್ರಾಸ್ತಾವಿಕ ಮಾತನಾಡಿ ಸುತ್ತೂರಿನ ಕ್ಷೇತ್ರದ ಮಹಿಮೆ ಶರಣ ಸಾಹಿತ್ಯ ಪರಿಷತ್ತಿನ ಸ್ಥಾಪಿಸಿದ ಬಗ್ಗೆ ತಿಳಿಸಿ ಅದರದೇ ಭಾಗವಾದ ಕದಳಿವೇದಿಕೆಯ ರಾಜ್ಯ ದಲ್ಲಿ ಜಿಲ್ಲೆಯ ಹೆಸರನ್ನ ಹೆಚ್ಚಿನ ರೀತಿ ಬೆಳಗಲಿ ಎಂದರು.ಶರಣೆ ಲೀಲಾವತಿ ವಚನ ಗಾಯನ ಹಾಡಿದರು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲೆಯ ಕಾರ್ಯದರ್ಶಿ ಆರ್ ಮುನಿರಾಜ ಸ್ವಾಗತ ಮಾಡಿ ನಿರೂಪಿಸಿದರು ಭಾರತಿಯವರು ವಂದಿಸಿಸಿದರು.

Leave a Reply

Your email address will not be published. Required fields are marked *

error: Content is protected !!