ಉದಯವಾಹಿನಿ,ಕೂಡ್ಲಿಗಿ : ಬರದ ತಾಂಡವವಾಡುತ್ತಿರುವ ಕೂಡ್ಲಿಗಿ ತಾಲೂಕಿನಲ್ಲಿ ಜಾನುವಾರುಗಳ ಮುಕಾರೋಧನೆ ಅರಿತ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ದೇವರ ಎತ್ತುಗಳಿಗೆ ನಿನ್ನೆ ಉಚಿತ ಮೇವು ಒದಗಿಸಿದರು.
ತಾಲೂಕಿನ ಹಾಲಸಾಗರ ಹಾಗೂ ಬೋರಯ್ಯನಹಟ್ಟಿ ಗ್ರಾಮದ ಬೊಮ್ಮಲಿಂಗೇಶ್ವರ ದೇವಸ್ಥಾನದ ಎತ್ತುಗಳಿಗೆ ಮೇವಿನ ಕೊರತೆ ಇರುವ ಬಗ್ಗೆ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ತಿಳಿದು ತಕ್ಷಣ ಉಚಿತವಾಗಿ ಮೇವು ಒದಗಿಸಿದ ಶಾಸಕರಿಗೆ ಗ್ರಾಮದ ಹಿರಿಯರು, ಮುಖಂಡರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಕೆ ಮಂಜುನಾಥ್. ಜಿ. ಮಾರೇಶ್. ಜಿ ಟಿ. ಮಾರನಾಯಕ. ಕೆ ಶಿವಣ್ಣ. ಜಿ. ಮೋಹನಕುಮಾರ್. ಟಿ ನಿಂಗಣ್ಣ. ಎಸ್. ಮಲ್ಲಿಕಾರ್ಜುನ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
