ಉದಯವಾಹಿನಿ : ಗುಲಾಬ್ ಜಾಮೂನ್ ಎಂದರೆ ಅನೇಕರಿಗೆ ತುಂಬಾ ಇಷ್ಟವಾದ ಸಿಹಿ. ಇವುಗಳು ರಸಭರಿತವಾಗಿ ಹಾಗೂ ಬಾಯಿಯಲ್ಲಿಟ್ಟರೆ ಕರಗುತ್ತವೆ. ಇವುಗಳನ್ನು ನೋಡಿದರೆ ತಿನ್ನಲು ಮನಸಾಗುತ್ತದೆ. ಮಕ್ಕಳು ಈ ಸಿಹಿಯನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಪ್ರತಿಯೊಬ್ಬರೂ ಈ ಸಿಹಿಯನ್ನು ತಮ್ಮದೇ ಆದ ಶೈಲಿಯಲ್ಲಿ ಮಾಡುತ್ತಾರೆ.ಪ್ರತಿ ಬಾರಿಗಿಂತ ವಿಭಿನ್ನವಾಗಿ ಈ ಬಾರಿ ಸಿಹಿ ಗೆಣಸಿನಿಂದ ಗುಲಾಬ್ ಜಾಮೂನ್ ಅನ್ನು ಮಾಡಿದರೆ ಇವು ಸೂಪರ್ ಆಗಿ ರುಚಿ ನೀಡುತ್ತವೆ. ಈ ಅತ್ಯಂತ ರುಚಿಕರವಾದ ಈ ರೆಸಿಪಿಯನ್ನು ಕಡಿಮೆ ಪದಾರ್ಥಗಳಿಂದ ತುಂಬಾ ಸರಳವಾಗಿ ತಯಾರಿಸಬಹುದು.
ಮನೆಯಲ್ಲಿ ತಕ್ಷಣಕ್ಕೆ ಈ ಸಿಹಿ ರೆಸಿಪಿಯನ್ನು ಮಾಡಲು ಬಯಸಿದರೆ ಇದು ಉತ್ತಮ ಆಯ್ಕೆಯಾಗಿದೆ. ಎಲ್ಲರೂ ಇದನ್ನು ಸುಲಭವಾಗಿ ಮಾಡಬಹುದು. ನೀವು ಹೀಗೆ ಈ ಸ್ವೀಟ್ ಅನ್ನು ನಾವು ತಿಳಿಸಿದಂತೆ ಮಾಡಿದರೆ ಎಲ್ಲರೂ ಇದನ್ನು ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಸಿಹಿ ಗೆಣಸು ತಿನ್ನದವರೂ ಸಹ ಈ ಸ್ವೀಟ್ ಅನ್ನು ಇಷ್ಟಪಡುತ್ತಾರೆ. ಇದೀಗ ಈ ಸಿಹಿ ಗೆಣಸಿನ ಗುಲಾಬ್ ಜಾಮೂನ್ ಮಾಡುವ ವಿಧಾನ ಹೇಗೆ ಹಾಗೂ ಇದಕ್ಕೆ ಬೇಕಾದ ಪದಾರ್ಥಗಳೇನು ಎಂಬುದನ್ನು ವಿವರವಾಗಿ ತಿಳಿಯೋಣ.
ಗೆಣಸು – ಅರ್ಧ ಕೆಜಿ (500 ಗ್ರಾಂ) ತುರಿದ ಬೆಲ್ಲ – 1 ಕಪ್ ಏಲಕ್ಕಿ ಪುಡಿ – 2 ಟೀಸ್ಪೂನ್
ಗೋಧಿ ಹಿಟ್ಟು – 3 ಟೀಸ್ಪೂನ್ ಹಾಲಿನ ಪುಡಿ – 1 ಟೀಸ್ಪೂನ್ ಉಪ್ಪು – ಒಂದು ಚಿಟಿಕೆ
ಬೇಕಿಂಗ್ ಸೋಡಾ – ಒಂದು ಚಿಟಿಕೆ ಎಣ್ಣೆ – ಆಳವಾಗಿ ಕರಿಯಲು ಬೇಕಾದಷ್ಟು
ತುಂಬಾ ರುಚಿರಕವಾದ ಸಿಹಿ ಗೆಣಸಿನ ಗುಲಾಬ್ ಜಾಮೂನ್ ತಯಾರಿಸಲು ಮೊದಲಿಗೆ ಸಿಹಿ ಗೆಣಸನ್ನು ಸ್ವಚ್ಛವಾಗಿ ತೊಳೆದು ತುಂಡುಗಳಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಹಾಕಿ, ಅದರೊಳಗೆ ಸಾಕಷ್ಟು ನೀರು ಹಾಕಿ. ಈಗ ಕುಕ್ಕರ್ ಅನ್ನು ಒಲೆಯ ಮೇಲೆ ಇರಿಸಿ, ಜ್ವಾಲೆಯನ್ನು ಮಧ್ಯಮ ಉರಿಯಲ್ಲಿ ಇರಿಸಿ ಮೂರು ಸೀಟಿಗಳು ಆಗುವವರೆಗೆ ಬೇಯಿಸಿಕೊಳ್ಳಿ. ಮೂರು ಸೀಟಿ ಆದ ಬಳಿಕ ಗೆಣಸನ್ನು ತೆಗೆದು ತಣ್ಣಗಾಗಲು ಬಿಡಿ. ಬಳಿಕ ಅವುಗಳನ್ನು ಸಿಪ್ಪೆ ತೆಗೆದು ತುರಿಯುವ ಮಣೆಯಿಂದ ತುರಿದುಕೊಳ್ಳಿ.
