ಉದಯವಾಹಿನಿ, ಆಮ್ಸ್ಟರ್‌ಡ್ಯಾಮ್: ಹೊಸ ವರ್ಷದ ಸಂಭ್ರಮಾಚರಣೆ ವೇಳೆ ನೆದರ್‌ಲ್ಯಾಂಡ್ ಆಮ್ಸ್ಟರ್‌ಡ್ಯಾಮ್‌ನ 150 ವರ್ಷಗಳ ಹಳೆಯ ವೊಂಡೆಲ್‌ಕೆರ್ಕ್ ಚರ್ಚ್‌ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ.
ಈ ಕುರಿತು ಆಮ್ಸ್ಟರ್‌ಡ್ಯಾಮ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಹೊಸ ವರ್ಷದ ಸಂಭ್ರಮಾಚರಣೆ ವೇಳೆ ವೊಂಡೆಲ್‌ಕೆರ್ಕ್ ಚರ್ಚ್‌ಗೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯ ಕಾಲಮಾನ ರಾತ್ರೊ 12:45ರ ಸುಮಾರಿಗೆ ತುರ್ತು ಕರೆಗಳು ಬಂದಿದ್ದು, ಕೂಡಲೇ ಸ್ಥಳದಲ್ಲಿ ಜನರನ್ನು ಸ್ಥಳಾಂತರಿಸಿ, ಆಮ್ಸ್ಟರ್‌ಡ್ಯಾಮ್‌ನಲ್ಲಿ ಎಚ್ಚರಿಕೆ ನೀಡಲಾಯಿತು. ಚರ್ಚ್ನ 164 ಅಡಿ ಗೋಪುರ ಕುಸಿದಿದ್ದು, ಛಾವಣಿ ಹಾನಿಗೊಳಗಾಗಿದೆ. ಇನ್ನೂ ಸಮೀಪದ 90 ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಂಭ್ರಮಾಚರಣೆ ವೇಳೆ ಸಿಡಿಸಿದ ಪಟಾಕಿಯಿಂದಾಗಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.
ಇನ್ನೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಿಯಂತ್ರಿಸಲು ಹರಸಾಹಸಪಟ್ಟರೂ ಕೂಡ ಚರ್ಚ್‌ನ ಗೋಪುರ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಚರ್ಚ್ನ್ನು ರಕ್ಷಿಸುವುದು ಕಷ್ಟಸಾಧ್ಯ. ಶೀಘ್ರದಲ್ಲೇ ಇಡೀ ಚರ್ಚ್ ಕುಸಿಯಬಹುದು ಎಂದು ವಕ್ತಾರೊಬ್ಬರು ಎಚ್ಚರಿಕೆ ನೀಡಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ನೆದರ್‌ಲ್ಯಾಂಡ್‌ನ ರಾಜಧಾನಿ ಆಮ್ಸ್ಟರ್‌ಡ್ಯಾಮ್‌ನಲ್ಲಿ 1872ರಲ್ಲಿ ವೊಂಡೆಲ್‌ಕೆರ್ಕ್ ಚರ್ಚ್ ಸ್ಥಾಪನೆಯಾಗಿತ್ತು. ಅದಾದ ಬಳಿಕ 1977ರವರೆಗೆ ರೋಮನ್ ಕ್ಯಾಥೋಲಿಕ್ ಚರ್ಚ್ ಆಗಿ ಕಾರ್ಯನಿರ್ವಹಿಸಿತ್ತು. ವೊಂಡೆಲ್‌ಕೆರ್ಕ್ ಚರ್ಚ್ ಪ್ರಮುಖ ಪ್ರವಾಸಿಗರ ಆಕರ್ಷಣೀಯ ಸ್ಥಳವಾಗಿತ್ತು.
