ಉದಯವಾಹಿನಿ, ವಿಜಯಪುರ: ಗ್ರಾಮೀಣ ಭಾಗದ ಪೌರಾಣಿಕ ನಾಟಕಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬ ಯುವಕರು ಕೈ ಜೋಡಿಸಬೇಕೆಂದು ಎಂದು ಶಿಕ್ಷಕ ನಿರ್ದೇಶಕ ಎ.ಎಂ.ನಾರಾಯಣಸ್ವಾಮಿ ತಿಳಿಸಿದರು.
ಇವರು ಪಟ್ಟಣದ ರಾಜೀವನಗರದ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರದಲ್ಲಿ ಶಾರದ ಕೃಪಪೋಷಿತ ಮಂಡಳಿ ಹಾಗೂ ಶಾಲಾ ಮಕ್ಕಳಿಂದ ಆಯೋಜಿಸಿದ್ದ ಶ್ರೀಕೃಷ್ಣ ಸಂಧಾನ ಕನ್ನಡ ಪೌರಣೆಕ ನಾಟಕದಲ್ಲಿ ಮಾತನಾಡಿದರು.
ಕಲಾವಿದರು ಸಲ್ಲಿಸಿರುವ ಸೇವೆ ಅಪಾರವಾದದ್ದು. ಪೌರಾಣಿಕ ನಾಟಕಗಳ ಪ್ರದರ್ಶನಗಳಿಂದ ಯುವಕರಿಗೆ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ತಿಳಿಸಿಕೊಡಲು ಸಹಕಾರಿಯಾಗುತ್ತದೆ. ನಾಡಿನ ಸಂಸ್ಕೃತಿ ಮತ್ತು ನಡೆ-ನುಡಿಯನ್ನು ಮರೆಯುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ಗ್ರಾಮೀಣ ಭಾಗದಲ್ಲಿ ಪೌರಾಣಿಕ ನಾಟಕ ಪರಿಚಯಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸಂಗೀತ ನಿರ್ದೇಶಕ ಎಂ.ವಿ.ನಾಯ್ಡು ಮಾತನಾಡಿ, ಕಲಾವಿದರಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಸುಮಾರು ವರ್ಷಗಳಿಂದ ಎ.ಎಂ.ನಾರಾಯಣಸ್ವಾಮಿ ಸಾವಿರೂರು ಸರಕಾರಿ ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಗ್ರಾಮೀಣ ಭಾಗದ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ನಿರಂತರ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದಿದ್ದಾರೆ. ಅವರ ಕಲಾ ಸೇವೆ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಕೀ ಬೋರ್ಡ್ ನಿರ್ದೇಶಕ ಕಿರಣ್ ಕುಮಾರ್, ತಬಲ ಮಾಸ್ಟರ್ ಮುರುಳಿ, ಶಿಕ್ಷಕರಾದ ಚಂದ್ರಶೇಕರ್ ಹಡಪದ್, ಪ್ರಕಾಶ್, ಬೈರೇಗೌಡ, ಗೀತಾ, ಕಂಟ್ರಾಕ್ಟರ್ ಮುನಿರಾಜು ಹಾಗೂ ನೂರಾರು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
