ಉದಯವಾಹಿನಿ, ಮೈಸೂರು : ಸಾಂಸ್ಕøತಿಕ ನಗರಿಯಲ್ಲಿ ಮಾಜಿ ಕಾರ್ಪೊರೇಟರ್ ಅಯಾಜ್ ಪಂಡು ಸಹೋದರ ಭೀಕರವಾಗಿ ಹತ್ಯೆಯಾಗಿದ್ದು, ಜನತೆ ಬೆಚ್ಚಿಬಿದ್ದಿದ್ದಾರೆ. ಅಕ್ಮಲ್ ಕೊಲೆಯಾದ ವ್ಯಕ್ತಿ. ರಾಜೀವ್ ನಗರ ನಿಮ್ರಾ ಮಸೀದಿ ಬಳಿ ಆಯರ್ ಬೇಕರಿ ಮುಂಭಾಗ ದುಷ್ಕರ್ಮಿಗಳು ದಾಳಿ ಮಾಡಿ ಹತ್ಯೆಗೈದಿದ್ದಾರೆ.
ನಿನ್ನೆ ರಾತ್ರಿ ಸುಮಾರು 9.30ರಲ್ಲಿ ಸ್ಕೂಟರ್‍ನಲ್ಲಿ ತೆರಳುತ್ತಿದ್ದ ಅಕ್ಮಲ್‍ರನ್ನು ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದೆ. ಕಾರ್ಯಕ್ರಮವೊಂದರಲ್ಲಿ ಫ್ಲೆಕ್ಸ್ ತೆರವು ಮಾಡಿದ ವಿಚಾರದಲ್ಲಿ ಮತ್ತೊಂದು ಗುಂಪಿನ ವರ್ತನೆ ಖಂಡಿಸಿ ಅಕ್ಮಲ್ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದರು. ಇದೇ ವಿಚಾರದಲ್ಲಿ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ.
