ಉದಯವಾಹಿನಿ , ಬೆಂಗಳೂರು: ಭಾರತ ದೇಶದ ರಾಜಕೀಯ ಇತಿಹಾಸದಲ್ಲಿ ಒಂದು ರಾಜಕೀಯ ಪಕ್ಷ ಅತ್ಯಂತ ಭ್ರಷ್ಟಾಚಾರದಲ್ಲಿ ಬಹಿರಂಗವಾಗಿ ಹಣ ಗಳಿಸಿರುವ ಪಕ್ಷವೆಂದರೆ ಅದು ಭಾರತೀಯ ಜನತಾ ಪಕ್ಷ ಎಂದು ಸಾಬೀತಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.
ದೇಶದ ಇತಿಹಾಸದಲ್ಲಿ ದೇಣಿಗೆ ರೂಪದಲ್ಲಿ ಚುನಾವಣೆ ಬಾಂಡ್ ಮುಖೇನ ಸುಮಾರು ರೂ.೭೦೦೦ ಕೋಟಿಗೂ ಅಧಿಕ ಪಡೆದಿರುವ ಬಿಜೆಪಿ ಜಾರಿ ನಿರ್ದೇಶನಲಯ ಆದಾಯ ತೆರಿಗೆ ಇಲಾಖೆಯಿಂದ ದಾಳಿಗೆ ಒಳಗಾದ ಸಂಸ್ಥೆಗಳಿಂದ ಹಣ ಪಡೆದಿರುವುದು ಬಿಜೆಪಿಯ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ತಿಳಿಸಿದ್ದಾರೆ.
ರಾಜಕೀಯಕ್ಕಾಗಿ ಪಾಕಿಸ್ತಾನವನ್ನು ದಿನನಿತ್ಯ ಎಳೆದು ತರುವ ಬಿಜೆಪಿಗರು ಪಾಕಿಸ್ತಾನದ ಸಂಸ್ಥೆಯಲ್ಲಿ ದೇಣಿಗೆ ಪಡೆದಿದ್ದಾರೆ ಇಂತಹ ನಕಲಿ ದೇಶ ಭಕ್ತರು ಬೇಕೆ? ನರೇಂದ್ರ ಮೋದಿ ರವರ ಸುಳ್ಳು ಘೋಷಣೆ ಎಂದು ಬಹಿರಂಗವಾಗಿದೆ ‘ನಾನು ತಿನ್ನಲ್ಲ ತಿನ್ನಲು ಬಿಡುವುದಿಲ್ಲ’ ಎಂಬುವ ಅವರ ಘೋಷಣೆ ಇಂದು ನಾನು ಹೆಚ್ಚು ತಿಂದು ಇನ್ನೊಬ್ಬರನ್ನು ತಿನ್ನಲು ಬಿಡುತ್ತೇನೆ ಎಂಬುದಾಗಿ ಪರಿವರ್ತನೆಯಾಗಿದೆ ಎಂದರು.
ರಾಜಕೀಯ ಪಕ್ಷಗಳನ್ನು ಎದುರಿಸಲು ಇಡಿ ಹಾಗೂ ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುವ ನಮ್ಮ ಕಾಂಗ್ರೆಸ್ ಪಕ್ಷದ ನಾಯಕರಾದ ರಾಹುಲ್ ಗಾಂಧಿ ರವರ ಹೇಳಿಕೆ ಅವರ ಹೋರಾಟ ಇಂದು ಸತ್ಯವಾಗಿದೆ ಎಂದರು. ನಗರದ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನ ಅಧ್ಯಕ್ಷರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಮನೋಹರ್
ಕಾಂಗ್ರೆಸ್ ಪಕ್ಷದ ಮುಖಂಡರಾದ ಆನಂದ್,ಜಿ ಜನಾರ್ಧನ್, ಎಲ್ ಜಯಸಿಂಹ, ಬಾಲಕೃಷ್ಣ, ಪ್ರಕಾಶ್,ಹೇಮರಾಜು, ಪುಟ್ಟರಾಜು,ಚಂದ್ರಶೇಖರ್, ಕೆ ಟಿ ನವೀನ್,ಉಮೇಶ್, ಕೆ ಪಿ ಸಿ ಸಿ ವಕ್ತಾರರಾದ ಆನಂದ್ ಕುಮಾರ್,ಹಾಗೂ ಕಾಂಗ್ರೆಸ್ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು..
