ಉದಯವಾಹಿನಿ, ವಿಜಯಪುರ:  ನಿರಂತರವಾಗಿ ತಪಾಸಣೆ ಹಾಗೂ ಅವಶ್ಯಕ ಚಿಕಿತ್ಸೆಗಳನ್ನು ನೀಡುವ ಮೂಲಕ ಭಾರತ ದೇಶವನ್ನು ೨೦೩೦ ರ ಒಳಗಾಗಿ ಏಡ್ಸ್ ಮುಕ್ತ ದೇಶವನ್ನಾಗಿಸಬೇಕಾಗಿದೆ ಎಂದು ಐಸಿಟಿಸಿ ಕೇಂದ್ರದ ಆಪ್ತಸಮಾಲೋಚಕಿಯರಾದ ಕಲಾವತಿ ತಿಳಿಸಿದರು.
ಅವರು ಇಲ್ಲಿನ ಪುರಸಭಾ ಕಾರ್ಯಾಲಯದ ಮುಂಭಾಗ ಶಾಂತಿ ಸಾಗರ್ ಹೋಟೆಲ್ ಬಳಿ ಸಾರ್ವಜನಿಕರಿಗಾಗಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಏಡ್ಸ್ ನಿಯಂತ್ರಣ ತಡೆಘಟಕ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ವರದಿಗಾರರನ್ನುದ್ದೇಷಿಸಿ ಮಾತನಾಡುತ್ತಿದ್ದರು.
ಸಮುದಾಯ ಆಧಾರಿತ ಸ್ಕ್ರೀನಿಂಗ್ ಮಾಡುವ ಮೂಲಕ ಆರಂಭಿಕ ರೋಗ ನಿರ್ಣಯವನ್ನು ಕಂಡುಹಿಡಿಯಲು ಹಾಗೂ ಸುಧಾರಿಸಲು ಮೊದಲ ಬಾರಿಗೆ ಪರೀಕ್ಷೆ ಕರನ್ನು ತಲುಪಲು ಸಾಧ್ಯವಾಗುತ್ತದೆ ಎಂದು, ವೈದ್ಯಕೀಯ ಸೇವೆಗಳು ವಿರಳವಾಗಿ ಬಳಸುವ ಜನರನ್ನು ತಲುಪಲು ಒಂದು ಪ್ರಮುಖ ವಿಧಾನವಾಗಿದೆ ಎಂದು ತಿಳಿಸಿದರು.
ಪಟ್ಟಣದ ಸುತ್ತಮುತ್ತಲಿನ ಗ್ರಾಮಾಂತರ ಜನರು ಪಟ್ಟಣದಲ್ಲಿ ನಡೆಯುವ ವಾರದ ಸಂತೆಗೆಂದು ಶುಕ್ರವಾರದಂದು ಬರುವ ಎಲ್ಲಾ ಸಾರ್ವಜನಿಕರಿಗೂ ಆರೋಗ್ಯ ತಪಾಸಣೆಯನ್ನು ಸರಕಾರಿ ಆಸ್ವತ್ರೆಯಿಂದ ಉಚಿತವಾಗಿ ಮಾಡಲಾಗುತ್ತಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಮತ್ತೊಬ್ಬ ಐಸಿಟಿಸಿ ಆಪ್ತಸಮಾಲೋಚಿಕಿ ಸುಮಾರವರು ಮಾತನಾಡುತ್ತಾ, ಈ ತಪಾಸಣೆಗಳಿಂದ ಅಪಾಯದಲ್ಲಿರುವ ಹೆಚ್‌ಐವಿ ರೋಗ ತಡೆಗಟ್ಟಲು ಹಾಗೂ ಅವಶ್ಯಕತೆ ಇರುವವರಿಗೆ ಆರೈಕೆ ಮತ್ತು ಸೇವೆಗಳನ್ನು ನೀಡಲು ಸಮುದಾಯ ಆಧಾರಿತ ಉಚಿತ ಎಚ್‌ಐವಿ ಆಪ್ತಸಮಾಲೋಚನೆ ಮತ್ತು ಪರೀಕ್ಷೆಗಳನ್ನು ಮಾಡುವುದಾಗಿದೆ ಎಂದು ತಿಳಿಸಿದರು.
ಸಾಮಾನ್ಯವಾಗಿ ಇಂತಹ ಶಿಬಿರಗಳನ್ನು ಜಾತ್ರೆ ಸಂತೆ ಜನನಿ ಬಿಡ ಸ್ಥಳಗಳಲ್ಲಿ ಏರ್ಪಡಿ ಸುತ್ತಲಿರುವುದಾಗಿ ಪ್ರತಿಯೊಬ್ಬರೂ ಈ ತಪಾಸಣೆಗೆ ಒಳಗಾಗಬೇಕೆಂದು ಈ ಪರೀಕ್ಷೆಯಲ್ಲಿ ಎಚ್‌ಐವಿ ಸೋಂಕಿಲ್ಲ ಎಂದು ತಿಳಿದುಕೊಂಡ ಜನರು ಲೈಂಗಿಕತೆ, ಮಾದಕ ವಸ್ತು ಬಳಕೆ, ಮತ್ತು ಆರೋಗ್ಯ ರಕ್ಷಣೆಯ ಬಗ್ಗೆ ಮುಂಜಾಗ್ರತೆ ಮತ್ತು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿದೆ ಎಂದು ಇದರಿಂದ ಹೆಚ್‌ಐವಿ ತಡೆಯಲು ಸಹಾಯವಾಗುತ್ತದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!