ಉದಯವಾಹಿನಿ , ವಿಜಯಪುರ : ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕೆಂದರೆ ಅದು ಪತ್ರಕರ್ತರುಗಳಾಗಿದ್ದು, ಸಮಾಜದಲ್ಲಿನ ಒಳಿತು ಕೆಡುಕುಗಳನ್ನು ಪಾರದರ್ಶಕವಾಗಿ ತೋರಿಸುವಂತವರಾಗಿದ್ದು, ಜನತೆಗೆ ಜ್ಞಾನ ನೀಡುವ ಮಾರ್ಗದರ್ಶಿ ಗುರುಗಳಾಗಬೇಕೆಂದು ಇಲ್ಲಿಗೆ ಸಮೀಪದ ಬುಳ್ಳಳ್ಳಿಯ ಶ್ರೀ ಪರ್ತಿ ಕ್ಷೇತ್ರದ ಶ್ರೀ ದ್ರೌಪದಿ ಆದಿಪರಾಶಕ್ತಿ ಮಹಾ ಆಶ್ರಮದ ಶ್ರೀ ಬಾಲ ಯೋಗಿ ಸಾಯಿ ಮಂಜುನಾಥ್ ಮಹಾರಾಜ್‌ರವರು ತಿಳಿಸಿದರು.
ಶ್ರೀಗಳ ಜನ್ಮದಿನವಾದ ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಶ್ರೀ ದ್ರೌಪದಿ ಆದಿಪರಾಶಕ್ತಿ ಮಹಾ ಆಶ್ರಮದ ಆವರಣದಲ್ಲಿ ಪತ್ರಕರ್ತರ ಸಂಘದಿಂದ ನೀಡಿದ ಅಭಿನಂದನೆಯನ್ನು ಸ್ವೀಕರಿಸಿ, ಮಾತನಾಡುತ್ತಿದ್ದರು. ಬೆಂ.ಗ್ರಾ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಶಾಂತ ಮೂರ್ತಿ, ಕುರುಬರಹಳ್ಳಿ ದೇವರಾಜ್, ನಾಗರಾಜ್, ನರಸಿಂಹಮೂರ್ತಿ, ಜೆ ಆರ್ ಮುನಿವೀರಣ್ಣ, ಮಟನ್ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
