ಉದಯವಾಹಿನಿ, ಅಥಣಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ತಮಗೆ ಸೂಕ್ತವಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಯಾವೊಬ್ಬ ಮತದಾರನೂ ಹೊರಗುಳಿಯಬಾರದು. ಸ್ವೀಪ್ ಸಮಿತಿಯ ಎಲ್ಲ ಸದಸ್ಯರು ಮತದಾನದ ಕುರಿತು ಜಾಗೃತಿ ಮೂಡಿಸಬೇಕು ಎಂದು ಬೆಳಗಾವಿ ಜಿ.ಪಂ ಯೋಜನಾ ನಿರ್ದೇಶಕ ಡಾ.ಎಮ್.ಕೃಷ್ಣಾರಾಜ ಹೇಳಿದರು.
ಅವರು ತಾಲೂಕಾ ಪಂಚಾಯತ ಕಾರ್ಯಾಲಯಕ್ಕೆ ಭೇಟಿ ನೀಡಿ ಲೋಕಸಭಾ ಚುನಾವಣೆ-2024 ರಲ್ಲಿ ಕಡ್ಡಾಯ ಮತದಾನ ಜಾಗೃತಿ ಅಭಿಯಾನ ಕುರಿತು ಸ್ವೀಪ್ ಸಮಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,
ಪ್ರತಿಯೊಂದು ಮತವೂ ಅತ್ಯಮೂಲ್ಯ ಎಂಬ ತಾತ್ವಿಕ ನೆಲಗಟ್ಟಿನಡಿ ಭವಿಷ್ಯದ ಮತದಾರರು, ನೂತನ ಮತದಾರರು ಮತ್ತು ನೋಂದಣಿ ರಹಿತ ಯುವ ಮತದಾರರನ್ನು ಗುರಿಯನ್ನಾಗಿಸಿಕೊಂಡು ಎಲ್ಲಾ ಸರ್ಕಾರಿ ಮತ್ತು ಖಾಸಗಿ ಪ್ರೌಢಶಾಲೆ, ಕಾಲೇಜು, ಮತ್ತು ಯುವ ಮತದಾರರಲ್ಲಿ ಚುನಾವಣೆ ಹಾಗೂ ಮತದಾನ ಪ್ರಕ್ರಿಯೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ. ಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರನು ಕೂಡಾ ತನ್ನ ಮತವನ್ನು ಚಲಾಯಿಸಬೇಕು. ಒಂದೊoದು ಮತವು ಕೂಡಾ ಅಮೂಲ್ಯವಾಗಿದ್ದು, ಯಾರು ಕೂಡಾ ಮತದಾನ ಮಾಡದೇ ಇರಬಾರದು ಪ್ರತಿಯೊಬ್ಬರು ಕೂಡಾ ತಮ್ಮ ಹಕ್ಕನ್ನು ಚಲಾಯಿಸಿ ಜೊತೆಗೆ ನಿಮ್ಮ ಮನೆಯ ಅಕ್ಕಪಕ್ಕದವರಿಗೂ ಕೂಡಾ ಮತದಾನ ಮಾಡುವಂತೆ ಜಾಗೃತಿ ಮೂಡಿಸಿ ಹಾಗೂ ಎಲ್ಲಾ ಕಡೆಗೂ ಮತದಾನದ ಕುರಿತು ವ್ಯಾಪಕವಾಗಿ ಪ್ರಚಾರ ಕೈಗೊಳ್ಳಬೇಕು. ಮತ್ತು ವಿಭಿನ್ನವಾಗಿ ಜನರಿಗೆ ಮತದಾನದ ಅರವು ಮೂಡಿಸಬೇಕು ಎಂದು ತಿಳಿಸಿದರು.
ಲೋಕಸಭಾ ಚುನಾವಣೆ -2024 ಮತದಾರರ ಮತದಾನದ ಜಾಗೃತಿ ಅಭಿಯಾನ ಸೆಲ್ಪಿ ಸ್ಯ್ಟಾಂಡ್, ಸಹಿ ಅಭಿಯಾನದ ಮತ್ತು ಮತದಾರರ ಪ್ರತಿಜ್ಞಾ ವಿಧಿ ಸ್ವೀಕಾರ ಮೂಲಕ ಸ್ವೀಪ್ ಸಮಿತಿಯ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.
ತಾಲೂಕಾ ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಗ್ರೇಡ್ -2 ತಹಶಿಲ್ದಾರ ಬಿ ವೈ ಹೊಸಕೇರಿ, ಸೇರಿದಂತೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!