
ಉದಯವಾಹಿನಿ,
ವರದಿ
ರವಿ ತೇಲಂಗಿ
ರಾಣಿ ಚನ್ನಮ್ಮ ಯೂನಿವರ್ಸಿಟಿಯ ಬಿ ಕಾಮ್ 5ನೇ ಸೆಮಿಸ್ಟರ ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಖಂಡನಾರ್ಹ. ಈ ಕೂಡಲೇ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳತ್ತೇವೆ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವು ರಾಜ್ಯದಲ್ಲಿ ಉತ್ತಮವಾದ ಹೆಸರನ್ನು ಹೊಂದಿರುವ ಗುಣಮಟ್ಟದ ಶಿಕ್ಷಣಕ್ಕೆ , ಉತ್ತಮ ಆಡಳಿತಾತ್ಮಕ ವ್ಯವಸ್ಥೆಗೆ ಹೆಸರುವಾಸಿಯಾಗಿದ್ದ ವಿಶ್ವವಿದ್ಯಾಲಯ. ಆದರೆ ಎರಡು ಭಾರಿ ಆಗಿದೆ . ನಡೆದಿರುವ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ವಿಶ್ವವಿದ್ಯಾಲಯಕ್ಕೆ ಕಪ್ಪು ಚುಕ್ಕೆ ತರುವಂತದ್ದು. ಇದು ವಿಷಾದನೀಯ ಸಂಗತಿ ಎಂದು ನಮ್ಮ ಉದಯವಾಹಿನಿ ಪತ್ರಿಕೆ ಹೊಂದಿಗೆ ಮಾಹಿತಿ ತಿಳಿಸಿದರು.
ರವೀಂದ್ರನಾಥ ಕುಲಸಚಿವರು ಮೌಲ್ಯಮಾಪನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ರಾಣಿ ಚನ್ನಮ್ಮ ಯೂನಿವರ್ಸಿಟಿಯ ಎಡವಟ್ಟು ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಪರೀಕ್ಷೆ ರದ್ದು ವಿದ್ಯಾರ್ಥಿಗಳು &ವಿದ್ಯಾರ್ಥಿನಿಯರಿಗೆ ಪರದಾಡುವ ಪರಸ್ಥಿತಿಯಾಗಿದೆ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯನ್ನು ಉಂಟು ಮಾಡಿದೆ.

