ಉದಯವಾಹಿನಿ, ನಗರದ ಸ೦ತ ಫ್ರಾನ್ಸಿಸ್ : ಕಾಲೇಜಿನ ಎನ್.ಸಿ.ಸಿ ಘಟಕದ ವತಿಯಿಂದ ನಿನ್ನೆ ಬೇಗೂರಿನ ವಿದ್ಯಾ ವಿಕಾಸ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಅರಣ್ಯ ದಿನದ ಪ್ರಯುಕ್ತ ಸಸಿ ನೆಡಲಾಯಿತು.
ಬಿಜೆಪಿ ಮುಖಂಡ ಸಿ.ಲೋಕೇಶ್, ವಿದ್ಯಾ ವಿಕಾಸ ಸರ್ಕಾರಿ ಪ್ರೌಢಶಾಲೆ, ಅಧ್ಯಕ್ಷ ಎಂ. ನಾರಾಯಣಗೌಡ, ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಉಪ ಮುಖ್ಯೋಪಾಧ್ಯಾಯ ಪರಮೇಶ್, ಸ೦ತ ಫ್ರಾನ್ಸಿಸ್ ಕಾಲೇಜಿನ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಅಮರೇಗೌಡ, ಪೂರ್ಣಿಮಾ ಜೋಗಿ ಹಾಗೂ ಎನ್‌ಸಿಸಿ ಸ್ವಯಂ ಸೇವಕರು ಉಪಸ್ಥಿತರಿದ್ದರು.
