

ಉದಯವಾಹಿನಿ ಗದಗ: ಸೊರಟೂರ ಗ್ರಾಮದ ಜೈ ಜವಾನ್ ಜೈ ಕಿಸಾನ್ ವೇದಿಕೆಯ ಅಧ್ಯಯನ ಮತ್ತು ತರಬೇತಿ ಕೇಂದ್ರದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕನ್ನಡ ಮಾತೆ ಭುವನೇಶ್ವರಿ ಫೋಟೋ ಪೂಜೆ ನೆರವೇರಿಸಿ ಪುಷ್ಪಾರ್ಪಣೆ ಮಾಡಿ ಅಧ್ಯಯನ ಕೇಂದ್ರದಲ್ಲಿ ಕನ್ನಡದ ಧ್ವಜ ಹಾರಿಸಿ ಕನ್ನಡಪರ ಘೋಷ ವಾಕ್ಯಗಳನ್ನು ಹೇಳುವ ಮೂಲಕ ಕನ್ನಡ ಅಭಿಮಾನ ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಯುವ ಪ್ರತಿಭೆ ಬಸವರಾಜ್ ಶೆಲಿಯಪ್ಪನವರ ಅವರಿಗೆ ಹೆತ್ತವರ ಮತ್ತು ಮಕ್ಕಳ ವೇದಿಕೆ ಕರುನಾಡ ಕಣ್ಮಣಿ ಪ್ರಶಸ್ತಿ ನೀಡಿರುವುದರಿಂದ ಆ ನಿಮಿತ್ಯವಾಗಿ ಅವರನ್ನು ಅಧ್ಯಯನ ಮತ್ತು ತರಬೇತಿ ಕೇಂದ್ರದ ಪರವಾಗಿ ಸತ್ಕರಿಸುವ ಮೂಲಕ ಅಭಿನಂದಿಸಲಾಯಿತು. ಬಸವರಾಜ ಶೆಲಿಯಪ್ಪನವರ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಕರ್ನಾಟಕ ಏಕೀಕರಣದ ಹಿನ್ನೆಲೆ ಹಾಗೂ ಕನ್ನಡ ನಾಡು ನುಡಿ ಹಾಗೂ ಕನ್ನಡ ಸಂಸ್ಕೃತಿಯ ಕುರಿತು ಮಾತನಾಡಿದರು. ವೇದಿಕೆ ಅಧ್ಯಕ್ಷರಾದ ಶಿವಾನಂದ ಎಸ್ ಮಾದಣ್ಣವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಸದಸ್ಯರುಗಳಾದ ಶಿವನಪ್ಪ ಚಪಾಟಿ, ಅರವಿಂದಪ್ಪ ಗುಡಿ, ಸಣ್ಣಪ್ಪ ಮಾದಣ್ಣವರ, ರಾಜೇಸಾಬ ಬಾಬುಖಾನವರ. ಮೌಲಾಸಾಬ ಬಾಬುಖಾನವರ. ಬಸವರಾಜ ಅಡ್ರಕಟ್ಟಿ. ಬಾಬುಸಾಬ್ ಗದಗಿನ. ಕರಿಯಪ್ಪ ಜಂಗವಾಡ. ಮಹಾವೀರ ಹೋಳಗಿ. ದಾಸಪ್ಪ ಮಾದಣ್ಣವರ, ಸೇರಿದಂತೆ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು. ಮಂಜುನಾಥ್ ಮಿರಗಾಣಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು .
