ಉದಯವಾಹಿನಿ, ಮಸ್ಸೂರಿ, ಉತ್ತರಾಖಂಡ: ಭಾರತ ಕ್ರಿಕೆಟ್ ತಂಡದ ಆಟಗಾರ ಕುಲದೀಪ್ ಯಾದವ್ ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಜೊತೆ ಶನಿವಾರ ಸಪ್ತಪದಿ ತುಳಿದರು. ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲದೀಪ್ ಯಾದವ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಉತ್ತರಾಖಂಡದ ಮಸ್ಸೂರಿಯ ಸುಂದರ ಬೆಟ್ಟಗಳ ನಡುವೆ ತಮ್ಮ ಬಾಲ್ಯದ ಗೆಳತಿ ವಂಶಿಕಾ ಚಡ್ಡಾ ಅವರೊಂದಿಗೆ ವಿವಾಹ ಬಂಧನಕ್ಕೆ ಒಳಗಾದರು.

ಉತ್ತರಾಖಂಡದ ಪ್ರಸಿದ್ಧ ಗಿರಿಧಾಮವಾದ ಮಸ್ಸೂರಿಯ ಹೋಟೆಲ್ ಸೆವೊಯ್‌ನಲ್ಲಿ ಈ ವಿವಾಹ ಕಾರ್ಯಕ್ರಮ ನೆರವೇರಿದ್ದು, ರಾತ್ರಿ 8 ಗಂಟೆಯ ಸುಮಾರಿಗೆ ಏಳು ಹೆಜ್ಜೆಗಳನ್ನು ಇಡುವ ಮೂಲಕ ಹೊಸ ಬದುಕಿಗೆ ಕಾಲಿಟ್ಟರು. ಈ ವೇಳೆ ಯಾದವ್​ ಅವರ ಸಹ ಕ್ರಿಕೆಟಿಗರು ಸಂತಸದಿಂದ ನೃತ್ಯ ಮಾಡುತ್ತಿರುವುದು ಕಂಡು ಬಂತು. ಯುಜುವೇಂದ್ರ ಚಾಹಲ್ ಮತ್ತು ತಿಲಕ್ ವರ್ಮಾ ಮೆರವಣಿಗೆಯ ಭವ್ಯತೆಯನ್ನು ಮತ್ತಷ್ಟು ಹೆಚ್ಚಿಸಿದರು.

ಮಸ್ಸೂರಿಯಲ್ಲಿ ಕುಲದೀಪ್ ರಾಯಲ್ ವೆಡ್ಡಿಂಗ್: ಕುಲದೀಪ್ ಯಾದವ್ ಮದುವೆಯಲ್ಲಿ ಭಾಗವಹಿಸಲು ಭಾರತ ಮತ್ತು ವಿದೇಶಗಳಿಂದ ಅನೇಕ ವಿಶೇಷ ಅತಿಥಿಗಳು ಮಸ್ಸೂರಿಗೆ ಆಗಮಿಸಿದ್ದರು. ಆಧ್ಯಾತ್ಮಿಕ ಗುರು ಧೀರೇಂದ್ರ ಕೃಷ್ಣ ಶಾಸ್ತ್ರಿ ಮಸ್ಸೂರಿಗೆ ಆಗಮಿಸಿ ನವವಿವಾಹಿತರನ್ನು ಆಶೀರ್ವದಿಸಿದರು. ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಕುಟುಂಬ ಸಮೇತವಾಗಿ ಮಸ್ಸೂರಿಗೆ ಆಗಮಿಸಿ, ನವದಂಪತಿಗೆ ಶುಭ ಕೋರಿದರು.

ವೈಭವದಿಂದ ಜರುಗಿದ ಮದುವೆ ಮೆರವಣಿಗೆ; ಮದುವೆಗೆ ರಾಜಮನೆತನದ ಸ್ಪರ್ಶ ನೀಡಲಾಗಿತ್ತು. ವರ ಕುಲದೀಪ್ ಯಾದವ್‌ಗಾಗಿ ಡೆಹ್ರಾಡೂನ್‌ನಿಂದ ವಿಶೇಷವಾಗಿ ಅಲಂಕರಿಸಲ್ಪಟ್ಟ ಕುದುರೆ ಮತ್ತು ರಾಯಲ್ ವಿಂಟೇಜ್ ರೋಲ್ಸ್ ರಾಯ್ಸ್ ತರಲಾಗಿತ್ತು. ಈ ವಿಂಟೇಜ್ ಕಾರು ಮತ್ತು ಸಾಂಪ್ರದಾಯಿಕ ಕುದುರೆಯೊಂದಿಗೆ ಮೆರವಣಿಗೆ ನಡೆಯಿತು. ಇದು ಸಮಾರಂಭಕ್ಕೆ ರಾಜಮನೆತನದ ಸ್ಪರ್ಶ ನೀಡಿತು.

ಕುಲದೀಪ್ ಯಾದವ್​ ಮದುವೆಯಲ್ಲಿ ತಿಲಕ್ ವರ್ಮಾ: ಭಾರತೀಯ ಯುವ ಕ್ರಿಕೆಟಿಗ ತಿಲಕ್ ವರ್ಮಾ ಕೂಡ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!