ಉದಯವಾಹಿನಿ, ಬಂಗಾರಪೇಟೆ: ಸನಾತನ ಧರ್ಮ ರಕ್ಷಣೆ ಮತ್ತು ದೇವಾಸ್ಥಾನಗಳ ಜೀರ್ಣೋದ್ದಾರಕ್ಕಾಗಿ ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿ ವ್ಯಯ ಮಾಡುತ್ತಿದೆ. ಆದರೆ ಸ್ಥಳೀಯ ಅಧಿಕಾರಿಗಳು ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸದೇ ಮನಸೋಯಿಚ್ಚೆ ಕಾಮಗಾರಿ ನಡೆಸಿ ಲಕ್ಷಾಂತರ ರೂಪಾಯಿ ಅಕ್ರಮ ಅವ್ಯವಹಾರ ನಡೆಸಿರುವುದರ ಬಗ್ಗೆ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ತಾಲ್ಲೂಕಿನ ಆವಣಿ ಗ್ರಾಮದ ಐತಿಹಾಸಿಕ ಪ್ರಸಿದ್ದ ರಾಮಲಿಂಗೇಶ್ವರ ದೇವಾಸ್ಥಾನ ಜೀರ್ಣೋದ್ದಾರಕ್ಕಾಗಿ ಕಲ್ಚರಲ್ ಅರ್ಥಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಚಿವಾಲಯವು ಸರಿ ಸುಮಾರು ೬೦ ಲಕ್ಷ ಕಾಮಗಾರಿಗೆ ಅನುಮೋದನೆ ನೀಡಿತ್ತು. ಆದರೆ ಇಲ್ಲಿನ ಕಾರ್ಯನಿರ್ವಹಣಾಧಿಕಾರಿ ಉನ್ನತ ಅಧಿಕಾರಿಗಳ ಸಹಕಾರದೊಂದಿಗೆ ಯಾವುದೇ ಕಾಮಗಾರಿಗೆ ಅನುಮೋದನೆ ಪಡೆಯದೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸದೇ ನೆರೆಯ ರಾಜ್ಯ ಚೆನ್ನೈ ಮೂಲದ ಕಾರ್ಮಿಕರನ್ನು ಕರೆತಂದು ಕಾಮಗಾರಿ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಗ್ರಾಮಸ್ಥರು ಪ್ರಶ್ನೆ ಮಾಡಲಾಗಿ, ಯಾವುದೇ ಉತ್ತರ ನೀಡದೇ ದಿವ್ಯ ಮೌನಕ್ಕೆ ಶರಣಾಗಿದ್ದಾರೆ.
ಕಾರ್ಮಿಕರು ತಿಳಿಸಿರುವಂತೆ ಕಾರ್ಯನಿರ್ವಹಣಾಧಿಕಾರಿಯು ಊಟ, ವಸತಿ, ವೇತನ ನೀಡುವ ಭರವಸೆಯನ್ನು ಕೊಟ್ಟು ಕರೆತಂದಿರುವುದಾಗಿ ಮತ್ತು ತಾವು ಸತತ ೩-೪ ತಿಂಗಳಿಂದ ಕೆಲಸ ಮಾಡುತ್ತಿದ್ದರು. ಇದುವರೆಗು ವೇತನ ಹಾಗೂ ಸೌಲಭ್ಯ ಕಲ್ಪಿಸಿರುವುದಿಲ್ಲ. ನಾವು ಕಡುಬಡವರಾಗಿದ್ದು, ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಇತ್ತ ತಮ್ಮ ಊರುಗಳಿಗೆ ಹೋಗಲು ಹಣ ನೀಡುತ್ತಿಲ್ಲ, ಮನೆಯ ಪರಿಸ್ಥಿತಿ ಶೋಷನೀಯವಾಗಿದೆ. ಆದ್ದರಿಂದ ದಯವಿಟ್ಟು ನಮ್ಮ ಬಾಕಿ ವೇತನವನ್ನು ಕೊಡಿಸಿಕೊಡಿ ನಾವು ನಮ್ಮ ಊರಿಗೆ ಹೋಗುತ್ತೇವೆ ಎಂದು ಗ್ರಾಮದ ಪ್ರಮುಖ ಮುಖಂಡರಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಮಾನತ್ತಿಗೆ ಆಗ್ರಹ: ಕಾರ್ಯನಿರ್ವಹಣಾಧಿಕಾರಿಯು ಅಧಿಕಾರ ವಹಿಸಿಕೊಂಡ ನಂತರ ನಿರಂತರವಾಗಿ ಜಿಲ್ಲೆಯ ಯಾವುದೇ ದೇವಾಲಯದ ಅಭಿವೃದ್ಧಿ ಕಾರ್ಯಗಳು ನಡೆದಿರುವುದಿಲ್ಲ. ಹಾಗೂ ಟೆಂಡರ್‌ನಲ್ಲಿ ಭಾರಿ ಗೋಲ್‌ಮಾಲ್ ನಡೆದಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ತನಿಖೆ ನಡೆಸಿ, ಸದರಿ ಅಧಿಕಾರಿಯನ್ನು ವಜಾ ಮಾಡಬೇಕು ಮತ್ತು ಬಡ ಕೂಲಿ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು, ಮತ್ತು ಎಲ್ಲಾ ಜಿಲ್ಲೆಯ ದೇವಾಲಯಗಳು ಅಭಿವೃದ್ಧಿ ಹಿನ್ನಡೆಗೆ ಕಾರಣವಾಗಿರುವ ಕಾರ್ಯನಿರ್ವಹಣಾಧಿಕಾರಿಯನ್ನು ತಕ್ಷಣದಿಂದ ಅಮಾನತ್ತು ಪಡಿಸಬೇಕೆಂದು ಹೆಸರು ಹೇಳಲು ಇಚ್ಚಿಸದ ಗ್ರಾಮದ ಮುಖಂಡರು ಆಗ್ರಹಿಸಿದ್ದಾ
