ಉದಯವಾಹಿನಿ :ಕೆಜಿಎಫ್: ಯುವ ಪೀಳಿಗೆಯ ದುಷ್ಟಗಳಿಂದ ದೂರ ಉಳಿದು ಕ್ರೀಡೆಗಳಲ್ಲಿ ಹೆಚ್ಚು ಭಾಗವಹಿಸುವುದರ ಮ‌ೂಲಕ ಉತ್ತಮ ಆರೋಗ್ಯಕರವಾಗಿ ಇರುವುದಕ್ಕೆ ಸಾಧ್ಯ ಎಂದು ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಮಹದೇವಪುರ ಜಿ. ಚಲಪತಿ ಹೇಳಿದರು.ಕೆಜಿಎಫ್ ನಗರದ ಊರಿಗಂ ರೈಲ್ವೆ ನಿಲ್ದಾಣ ಬಳಿ ಪುಡ್ ಬಾಲ್ ಟೂರ್ನಿಯಲ್ಲಿ ಭಾಗವಹಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು.ಕೆಜಿಎಫ್ ನಗರದಿಂದ ವಿವಿಧ ಕ್ರೀಡೆಗಳಲ್ಲಿ ನೂರಾರು ಕ್ರೀಡಾಪಟುಗಳು ರಾಜ್ಯ ಮತ್ತು ರಾಷ್ಟ್ರೀಯ ತಂಡದಲ್ಲಿ ಪ್ರತಿನಿಧಿಸುವವರು ಇದ್ದಾರೆ ಅವರಿಗೆ ಗೌರವ ಸೂಚಿಸಬೇಕು ಎಂದರು.
ರಾಜ್ಯ ಹಾಗೂ ರಾಷ್ಟ್ರೀಯ ತಂಡಗಳಲ್ಲಿ ಪ್ರತಿನಿಧಿಸಿರುವ ಕ್ರೀಡಾಪಟುಗಳ ಮಾರ್ಗದರ್ಶನವನ್ನು ಪಡೆದು ಯುವ ಪ್ರತಿಭೆಗಳು ಸಾಧನೆ ಮಾಡಿದರು.ಕೆಜಿಎಫ್ ನಗರದಲ್ಲಿ ಪುಡ್ ಬಾಲ್ ಟೂರ್ನಿಯಲ್ಲಿ ಭಾಗವಹಿಸಿ ಜಯಗಳಿಸಿದ ತಂಡಗಳಿಗೆ ಬಹುಮಾನವನ್ನು ವಿತರಣೆ ಮಾಡಿದರು.ಕೆಜಿಎಫ್ ತಂಡ ಪ್ರಥಮ ಸ್ಥಾನ, ಬೆಂಗಳೂರು ತಂಡ ದ್ವಿತೀಯ ಸ್ಥಾನವನ್ನು ಪಡೆದ ತಂಡಗಳಿಗೆ ನಗದು ಹಾಗೂ ಟ್ರೋಫಿಗಳನ್ನು ವಿತರಣೆ ಮಾಡಿದರು.ಈ ಕಾರ್ಯಕ್ರಮದಲ್ಲಿ ಎಸ್ಸಿ ಮೋರ್ಚಾ ಕೆಜಿಎಫ್ ನಗರ ಅಧ್ಯಕ್ಷ ರಾಜ್ ಕುಮಾರ್, ರಾಷ್ಟ್ರೀಯ ಪುಡ್ ಬಾಲ್ ತಂಡದ ಮಾಜಿ ಆಟಗಾರ ರಮಣ ಸೇರಿದಂತೆ ಕ್ರೀಡಾಪಟುಗಳು ಇದ್ದರೂ.

Leave a Reply

Your email address will not be published. Required fields are marked *

error: Content is protected !!