ಉದಯವಾಹಿನಿ, ಕೆ.ಆರ್.ಪುರ: ಲೋಕಸಭಾ ಚುನಾವಣೆಯಲ್ಲಿ ಮಹದೇವಪುರ ಕ್ಷೇತ್ರದಲ್ಲಿ ಹೆಚ್ಚಿನ ಮತದಾನ ಮಾಡುವಂತೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ ಎಂದು ಚುನಾವಣಾ ಅಧಿಕಾರಿ ಕೃಪಾಲಿನಿ ಅವರು ತಿಳಿಸಿದರು.
ಬೆಂಗಳೂರು ಪೂರ್ವ ತಾಲ್ಲೂಕಿನ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಸರ್ವ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು.
ಮತದಾನ ಕಡಿಮೆ ಆಗುತ್ತಿರುವ ಸ್ಥಳಗಳನ್ನು ಗುರುತಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮತದಾನ ಹೆಚ್ಚಿಸುವ ಕಾರ್ಯ ಮಾಡಲಾಗುವುದು ಎಂದು ನುಡಿದರು.
ಪಕ್ಷಗಳ ಜಾಹೀರಾತು ಕುರಿತು ಸಾರ್ವಜನಿಕವಾಗಿ ಹಾಕಿರುವುದನ್ನು ತೆರವುಗೊಳಿಸಲಾಗುತ್ತಿದೆ.
ಇಂತಹ ಜಾಹೀರಾತುಗಳ ಸಾರ್ವಜನಿಕರು ಸಿವಿಜಿಲೆನ್ಸ್ ಆಪ್ ಮೂಲಕ ಗಮನಕ್ಕೆ ತಂದರೆ ತೆರವು ಕಾರ್ಯ ಮಾಡಲಾಗುವುದು ಎಂದು ವಿವರಿಸಿದರು.
ಮಕ್ಕಳನ್ನು ಪ್ರಚಾರಕ್ಕೆ ಬಳಸಿಕೊಂಡರೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಜೋಮೋಟ್ ದೂರು ದಾಖಲಾಗುತ್ತದೆ ಎಂದು ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ವೈ.ರವಿ,ನೊಡಲ್ ಅಧಿಕಾರಿ ರಾಜೇಶ್,ಎಸಿಪಿ ಪ್ರಿಯದರ್ಶಿನಿ, ಡಿವೈಎಸ್ ಪಿ. ದೇವರಾಜ್, ಬಿಜೆಪಿ ಮಂಡಲ ಅಧ್ಯಕ್ಷರಾದ ಮನೋಹರರೆಡ್ಡಿ,ನಟರಾಜ್,ಮುಖಂಡರಾದ ಪಾಪಣ್ಣ ಇದ್ದರು.
