ಉದಯವಾಹಿನಿ, ವಿಜಯಪುರ : ಮುಸಲ್ಮಾನರ ಪವಿತ್ರವಾದ ಹಬ್ಬವಾದ ರಂಜಾನ್ ಒಂದುತಿಂಗಳ ಉಪವಾಸವಿರುವುದರಿಂದ ಉಪವಾಸ ಬಿಡಲು ಹಣ್ಣುಹಂಪಲುಗಳನ್ನು ತಿನ್ನುವುದರ ಮೂಲಕ ಬಿಡುವುದರಿಂದ ಎಲ್ಲೆಡೆ ಹಣ್ಣುಹಂಪಲುಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗಿದೆ. ಗ್ರಾಹಕರು ದುಬಾರಿ ಹಣ ಕೊಟ್ಟು ಹಣ್ಣುಗಳನ್ನು ಖರೀದಿಸುತ್ತಿದ್ದಾರೆ.
ಮುಸಲ್ಮಾನರು ಒಂದು ತಿಂಗಳ ಕಾಲ ರಂಜಾನ್ ತಿಂಗಳಿನಲ್ಲಿ ಬೆಳಿಗ್ಗೆ ಊಟ ಮಾಡಿದರು ಸಂಜೆಯವರೆಗೆ ನೀರೂ ಸಹ ಕುಡಿಯದೆ ಉಪವಾಸ ಇರುವುದರಿಂದ ಸಂಜೆಉಪವಾಸ ಬಿಡುವ ವೇಳೆಯಲ್ಲಿ ಹಣ್ಣುಹಂಪಲುಗಳನ್ನು ತಿನ್ನುವುದರ ಮೂಲಕ, ಜ್ಯೂಸ್ ಕುಡಿಯುವುದರ ಮೂಲಕ ಉಪವಾಸವನ್ನು ಬಿಡಲಿದ್ದಾರೆ. ರಂಜಾನ್ ಉಪವಾಸ ಪ್ರಾರಂಭವಾದಾಗಿನಿಂದಲೂ ಮುಗಿಯುವವರೆಗೂ ಒಂದು ತಿಂಗಳ ಕಾಲ ಹಣ್ಣುಹಂಪಲುಗಳ ಬೆಲೆ ಏರಿಕೆ ಹೆಚ್ಚಾಗಿರುತ್ತದೆ. ಹಣ್ಣುಗಳನ್ನು ಮಾತನಾಡಿಸಲು ಆಗುವುದಿಲ್ಲ. ಒಂದೊಂದು ಹಣ್ಣುಗಳು ಒಂದೊಂದು ರೀತಿ ಬೆಲೆ ಏರಿಕೆಯಾಗಿರುತ್ತದೆ. ಪ್ರತಿ ಮುಸಲ್ಮಾನರು ಒಂದು ಬಾರಿ ೫೦೦ ರಿಂದ ೬೦೦ ರೂ. ಬೆಲೆಯ ಹಣ್ಣುಗಳನ್ನು ಖರೀದಿಸುತ್ತಾರೆ. ಕರ್ಜೂರ, ಹೆಚ್ಚಾಗಿ ಬಳಸುವುದರಿಂದ ಅದರ ಬೆಲೆಯೂ ಸಹ ದುಬಾರಿಯಾಗಿರುತ್ತದೆ.
ಹಿಜರಿ ತಿಂಗಳಲ್ಲಿ ಅತ್ಯಂತ ಪವಿತ್ರ ತಿಂಗಳಾಗಿರುವ ರಂಜಾನ್ ಮಾಸ ಪ್ರಾರಂಭವಾಗಿದೆ. ಈ ತಿಂಗಳಲ್ಲಿ ಉಪವಾಸ ಕಡ್ಡಾಯವಾಗಿದೆ. ಒಂದು ತಿಂಗಳು ಪೂರ್ತಿ ಉಪವಾಸ ಮಾಡುವ ಮೂಲಕ ಅಲ್ಲಾನ ಸ್ಮರಣೆ ಮಾಡುವ ಹಾಗೂ ಎಲ್ಲರೂ ಸಂಭ್ರಮಿಸುವ ಬಹು ದೊಡ್ಡ ಹಬ್ಬವಾಗಿದೆ. ಹಣ್ಣಿನ ಹಾಗೂ ಸಮೋಸ ಮಾರಾಟ ಮಾಡುವ ಗಾಡಿಗಳಿಗೆ ಇಫ್ತಾರ್ ವೇಳೆಯಲ್ಲಿ ಬಿಡುವಿಲ್ಲದ ಕೆಲಸ. ಅದುವರೆಗೆ ಹಸಿದಿದ್ದವರನ್ನು ತಣಿಸುವುದು. ಇದೇ ಅಂಗಡಿಗಳು. ಪಪ್ಪಾಯ, ಬಾಳೆಹಣ್ಣು, ಮೋಸಂಬಿ, ಆರೆಂಜ್, ಅನಾನಸ್, ಸೇಬು, ಕರಬೂಜ, ಕಲ್ಲಂಗಡಿಹಣ್ಣು, ದ್ರಾಕ್ಷಿ, ಶರಬತ್ತು, ಸೌತೇಕಾಯಿ, ಆಷ್, ಇತರೆ ಹೆಚ್ಚಿನ ಹಣ್ಣುಗಳನ್ನು ಹೆಚ್ಚಾಗಿ ರಂಜಾನ್ ಸಂದರ್ಭದಲ್ಲಿ ಉಪಯೋಗಿಸುತ್ತಾರೆ. ಅದಕ್ಕಾಗಿ ಹಣ್ಣಿನ ಬೆಲೆ ಗಗನಕ್ಕೇರಿದೆ.
ಅಗತ್ಯ ವಸ್ತುಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಒಂದೊಂದು ಬೆಲೆಯೂ ದುಬಾರಿಯಾಗುತ್ತಿದೆ. ಹೆಚ್ಚಾಗಿರುವುದರಿಂದ ಬೆಂಗಳೂರು ಇತರೆ ಕಡೆಗಳಿಂದ ಸರಕು ಸಾಗಾಣಿಕೆ ಮಾಡಿಕೊಂಡು ಬರಲು ದುಬಾರಿ ವೆಚ್ಚವನ್ನು ಭರಿಸಬೇಕಾಗಿದೆ. ಎಂದು ವ್ಯಾಪಾರಸ್ಥರು ಹೇಳುತ್ತಾರೆ.
ಹಣ್ಣಿನ ಅಂಗಡಿಗಳು ಗ್ರಾಹಕರನ್ನು ಕೈಬೀಸಿ ಕರೆಯುವಂತೆ ಆಗಿದೆ. ಬೆಳಿಗ್ಗೆ ೪-೩೦ರ ವೇಳೆಗೆ ಸೂರ್ಯ ಹುಟ್ಟುವ ಮುನ್ನ ಒಂದಿಷ್ಟು ಆಹಾರ ಸೇವನೆ ಮಾಡಿ ಮುಗಿಸಿರುತ್ತಾರೆ. ನಂತರ ಸುಮಾರು ಸಂಜೆ ೬-೩೦ರ ನಂತರ ಸೂರ್ಯಾಸ್ತವಾದ ನಂತರ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ ನಂತರ ಆಹಾರ ಸೇವನೆ ಮಾಡುತ್ತಾರೆ. ಉಪವಾಸ ಮುಗಿಯುವ ಮುನ್ನ ಹಣ್ಣುಹಂಪಲುಗಳನ್ನು ಮುಂದಿಟ್ಟುಕೊಂಡು ನಿಗಧಿತ ಸಮಯದಲ್ಲಿ ಉಪವಾಸವನ್ನು ಅಂತ್ಯಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ಖರ್ಜೂರಗಳಿಗೆ, ಹಣ್ಣುಹಂಪಲುಗಳಿಗೆ ಹಾಗೂ ಸಮೋಸ ಗಳಿಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಾಗುತ್ತದೆ.
ಹಣ್ಣಿನ ಬೆಲೆ ಈ ರೀತಿ;ಆಪಲ್ ಒಂದು ಕೆ.ಜಿಗೆ ೨೨೦ ರಿಂದ೨೬೦, ಸಪೋಟ ೧೦೦ರೂ, ಆರೆಂಜ್ ೨೫೦ರೂ., ಪಚ್ಚಬಾಳೆ ಹಣ್ಣು ೪೦ರೂ, ಏಲಕ್ಕಿ ಬಾಳೆಹಣ್ಣು ೭೦ರೂ. ದ್ರಾಕ್ಷಿ ೧೦೦ರೂ., ಮೋಸಂಬಿ ೧೦೦ರೂ., ದಾಳಿಂಬೆ ೨೨೦ರೂ., ಮಾವಿನಹಣ್ಣು ೨೨೦ರೂ., ಕರಬೂಜ ೩೦ರೂ., ಕಲ್ಲಂಗಡಿಹಣ್ಣು ೪೦ರೂ. ಪಪ್ಪಾಯಿ ೪೦ರೂ., ಅನಾನಸ್ ೯೦ರೂ., ಕರ್ಜೂg ೨೫೦ ಈ ರೀತಿ ಮಾರಾಟವಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!