ಉದಯವಾಹಿನಿ, ಆನೇಕಲ್ : ತಾಲ್ಲೂಕಿನ ಗುಡ್ಡಹಟ್ಟಿ ಗೇಟ್ ಬಳಿಯಿರುವ ಎಸ್.ವಿ.ವಿ.ಎನ್. ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವಿ.ಚಂದನಾ ಎಂಬ ವಿದ್ಯಾರ್ಥಿಯು ೬೦೦ ಅಂಕಗಳಿಗೆ ೫೯೨ ಅಂಕಗಳನ್ನು ಪಡೆದಿದ್ದಾಳೆ ಹಾಗೂ ವಿಜ್ಞಾನ ವಿಭಾಗದಲ್ಲಿ ಪ್ರತೀವ್ ಮತ್ತು ನಿಸರ್ಗ ಎಂಬ ವಿದ್ಯಾರ್ಥಿಗಳು ೬೦೦ ಅಂಕಗಳಿಗೆ ೫೮೧ ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಮತ್ತು ತಾಲ್ಲೂಕಿಗೆ ಕೀರ್ತಿ ತಂದು ಕೊಟ್ಟಿದ್ದಾರೆ,
ಇನ್ನು ಇದೇ ಸಂಧರ್ಭದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರು ಸಿಹಿ ತಿನ್ನಿಸುವ ಮೂಲಕ ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಈ ವೇಳೆ ಎಸ್.ವಿ.ವಿ.ಎನ್. ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸರೋಜ ಅಪಚ್ಚು ರವರು ಮಾತನಾಡಿ ಎಸ್.ವಿ.ವಿ.ಎನ್. ಪಿಯು ಕಾಲೇಜಿನಲ್ಲಿ ಒಟ್ಟು ೪೦೫ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು ಅದರಲ್ಲಿ ೨೩೦ ವಿದ್ಯಾರ್ಥಿಗಳು ಉನ್ನತ ಶ್ರೇಣಿ ಅಂಕ ಪಡೆದಿದ್ದಾರೆ ಹಾಗೂ ೧೬೦ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ ಹಾಗೆಯೇ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ನಮ್ಮ ಕಾಲೇಜಿನಲ್ಲಿ ನೂರಕ್ಕೆ ನೂರರಷ್ಠು ಪಲಿತಾಂಶ ಬಂದಿದೆ ಎಂದು ಹೇಳಿದರು. ನಮ್ಮ ಒಂದು ಕಾಲೇಜಿನಲ್ಲಿ ಶೇ ೯೦ ರಷ್ಠು ವಿದ್ಯಾರ್ಥಿಗಳು ಗ್ರಾಮೀಣ ಬಾಗದ ವಿದ್ಯಾರ್ಥಿಗಳೇ ಆಗಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನು ಸಮಾಜಕ್ಕೆ ಉತ್ತಮವಾದ ಪ್ರಜೆಗಳನ್ನು ಮಾಡುವುದೇ ನಮ್ಮ ಎಸ್.ವಿ.ವಿ.ಎನ್. ಕಾಲೇಜಿನ ಮುಖ್ಯ ಗುರಿಯಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಸ್.ವಿ.ವಿ.ಎನ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾದ ಜೆ.ನಾಗರಾಜ್, ಎಸ್.ವಿ.ವಿ.ಎನ್. ಪಿಯು ಕಾಲೇಜಿನ ವಾಜಿಜ್ಯ ವಿಭಾಗದ ಸಂಯೋಜಕರಾದ ಕೆ.ಎಲ್. ಶ್ರೀಶಾ, ವಿಜ್ಞಾನ ವಿಭಾಗದ ಸಂಯೋಜಕರಾದ ಪ್ರತಾಪ್. ಕಾಲೇಜಿನ ಆಡಳಿತ ಮಂಡಳಿಯವರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!