ಉದಯವಾಹಿನಿ, ಸಿರುಗುಪ್ಪ: ತಾಲ್ಲೂಕಿನ ಸಿರಿಗೇರಿ ಗ್ರಾಮದ ಜೆ.ಹೆಚ್.ವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕçತಿ ಇಲಾಖೆಯ ವಾರ್ಷಿಕ ಧನ ಸಹಾಯದೊಂದಿಗೆ ಹಾಗೂ ಧಾತ್ರಿ ರಂಗ ಸಂಸ್ಥೆಯ ಸಹಯೋಗದೊಂದಿಗೆ ಏಪ್ರಿಲ್ ೨೫ ರಿಂದ ಮೇ ೨೦ ರವರೆಗೆ ಬಯಲು ಸೀಮೆ ಬಣ್ಣದ ಕಲವರ ಎಂಬ ಶೀರ್ಷಿಕೆ ಅಡಿಯಲ್ಲಿ ಬೇಸಿಗೆ ರಂಗಭೂಮಿ ತರಗತಿಗಳಾದ ಮಕ್ಕಳಿಗೆ ಜಾನಪದ,ರಂಗಗೀತೆಗಳು,ನೃತ್ಯಗಳು,ನಾಟಕಗಳು,ಕAಸಾಳೆ,ಡೊಳ್ಳು ನೃತ್ಯ,ಸಾಮಾಜಿಕ ಹಾಸ್ಯ ನಾಟಕ ಜರುಗಿದ್ದವು.ಗುರುವಾರ ಸಮರೋಪ ಸಮಾರಂಭ ನಡೆಯಿತು.
ಧಾತ್ರಿ ರಂಗ ಸಂಸ್ಥೆಯ ಕಾರ್ಯದರ್ಶಿ ವೈ.ಮಂಜುನಾಥ್ ಮಾತನಾಡಿ ಈ ೨೫ ದಿಗಳಲ್ಲಿ ಮಕ್ಕಳು ತಮ್ಮ ಜ್ಞಾನವನ್ನು ಈ ಬೇಸಿಗೆ ಶಿಭಿರದ ದಿನಗಳಲ್ಲಿ ಚಟುವಟಿಕೆಯಾಧರಿತ ಪಯೋಗಗಳನ್ನು ಮಾಡಿ ಸದುಪಯೋಗ ಪಡಿಸಿಕೊಂಡಿದ್ದಾರೆ.ಪೋಷಕರು ಮಕ್ಕಳನ್ನು ಚಟುವಟಿಕೆಯಾಧರಿತ ತರಗತಿಗಳಿಗೆ ಅಭ್ಯಾಸ ಮಾಡಿಸಿ.ಸಮಯದ ಅಭಾವದಿಂದ ಇನ್ನು ಹೆಚ್ಚು ನಾಟಕಗಳು ಕಲಿಸದೇ ಉಳಿದಿವೆ ಮುಂದಿನ ದಿನಗಳಲ್ಲಿ ಅದನ್ನು ಸರಿಪಡಿಸಿಕೊಳ್ಳೋಣ.
ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ಭಜಂತ್ರಿ ರಮೇಶ್ ಮಾತನಾಡಿ ಪೋಷಕರು,ಮಕ್ಕಳು ಇಂತಹ ಶಿಬಿರಗಳನ್ನು ಬಳಸಿಕೊಂಡು ಸದ್ವಿನಿಯೋಗ ಮಾಡಿಕೊಂಡರೆ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.ಧಾತ್ರಿ ರಂಗ ಸಂಸ್ಥೆಯ ಅಧ್ಯಕ್ಷ ಎಂ.ಪAಪನಗೌಡ ಮಾತನಾಡಿದರು.
ನಿರ್ದೇಶಕರಾದ ಸವಿತಾ ಗಣೇಶ್ ರಾಯಚೂರು,ವೈ.ರಾಜಶೇಖರ್,ವಿಜಯಪುರದ ಪರಶುರಾಮ್ ಗುಡಳ್ಳಿ ನಿದೇರ್ಶನ ಮಾಡಿದ ನಾಟಕಗಳಾದ ಕತ್ತಲೆ ನಗರಿಯ ತಲೆಕೆಟ್ಟ ರಾಜ,ಕಂಸಾಳೆ ನೃತ್ಯ,ಏಳು ಮಂದಿ ಅಣ್ಣ ತಂಬ್ರು, ಎಂಬ ನಾಟಕಗಳು ಪ್ರದರ್ಶನಗೊಂಡವು.
ಪ್ರಮುಖರಾದ ಜೆ.ದೊಡ್ಡನಗೌಡ್ರು,ನಿವೃತ್ತ ವೈದ್ಯಾಧಿಕಾರಿ ಟಿ.ಮೃತ್ಯುಂಜಯ ಸ್ವಾಮಿ,ಗೋಡೆ ಹೇಮಾವತಿ,ಟಿ.ಗುರುದೇವ,ರಂಗನಿದೇರ್ಶಕರಾದ ನವೀನ್ ಪ್ರತಾಪ್ ಚನ್ನಗಿರಿ,ರುದ್ರೇಶ್ ಬಳಿಗಾರ್,ಗ್ರಾ.ಪಂ.ಸದಸ್ಯರಾದ ಗೋಡೆ ಚಿನ್ನಪ್ಪ,ಹೊಸಪೇಟೆಯ ಇನ್ಸಾಫ್.ಪಿ,ಭೀಮೇಶ್ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!