ಉದಯವಾಹಿನಿ, ಬೆಂಗಳೂರು : ಇಂಟರ್ನ್ಯಾಷನಲ್ ಟೇಕ್ವಾಂಡೋ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ ೧೦ನೆಯ ಏಶಿಯನ್ ಐ ಟಿ ಎಫ್ ಟೇಕ್ವಾಂಡೋ ಚಾಂಪಿಯನ್ಷಿಪ್ ೨೦೨೪ ಕೋರಮಂಗಲ ಒಳಾಂಗಣ ಕ್ರೀಡಾಂಗಣ ಬೆಂಗಳೂರಿನಲ್ಲಿ ದಿನಾಂಕ ೧೯ ರಿಂದ ೨೫ ಆಗಸ್ಟ್ ೨೦೨೪ ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಈ ಚಾಂಪಿಯನ್ಶಿಪ್ನಲ್ಲಿ ೨೫೦ ಭಾರತೀಯ ಕ್ರೀಡಾಪಟುಗಳು ಏಷ್ಯಾ ಖಂಡದಾದ್ಯಂತ ೩೦ ದೇಶಗಳಿಂದ ೭೦೦ ಕ್ಕೂ ಹೆಚ್ಚು ಸ್ಪರ್ದಿಗಳು ಭಾಗವಹಿಸಿದ್ದರು. ಭಾರತ ತಂಡಕ್ಕೆ ಕಳೆದ ೪ ತಿಂಗಳುಗಳಿಂದ ಕಠಿಣ ತರಬೇತಿ ನೀಡಲಾಗಿತ್ತು. ಮಾಸ್ಟರ್ ಪ್ರದೀಪ್ ಜನಾರ್ಧನ್, ಕೋಚ್ ಪುನೀತ್ ರಾಮಚಂದ್ರಪ್ಪ ಮತ್ತು ಮಾಸ್ಟರ್ ಕಿಮ್ ಜೊಂಗ್ ಚೋಲ್ ೮ತ್ ಡ್ಯಾನ್ ಬ್ಲಾಕ್ ಬೆಲ್ಟ್ ಕೊರಿಯಾ ಇಂದ ಬಂದು ನಮ್ಮ ಭಾರತೀಯ ಕ್ರೀಡಾಪಟುಗಳಿಗೆ ವಿಶೇಷ ತರಬೇತಿ ನೀಡಿದರು.
ಬೆಂಗಳೂರಿನ ಕೊಡಿಗೇಹಳ್ಳಿ ನಿವಾಸಿಗಳಾದ ಸೌಜನ್ಯ ಮಂಜುನಾಥ್ ಮತ್ತು ಶಶಾಂಕ್ ಮಂಜುನಾಥ್ ಎಂಬ ಕ್ರೀಡಾಪಟುಗಳು ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ, ವಿದ್ಯಾರಣ್ಯಪುರ ದಲ್ಲಿ ಓದುತ್ತಿರುವ ಈ ಮಕ್ಕಳು ಈ ೧೦ನೆಯ ಏಶಿಯನ್ ಐ ಟಿ ಎಫ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಭಾರತಕ್ಕೆ ವಿಜಯವನ್ನು ತಂದು ಕೊಟ್ಟಿರುತ್ತಾರೆ.
ಸೌಜನ್ಯ ಮಂಜುನಾಥ್ (ರೆಡ್ ಬೆಲ್ಟ್ ೧೫ ವರ್ಷ) ಒಂದು ಚಿನ್ನದ ಪದಕವನ್ನು ಪ್ಯಾಟರ್ನ್ಸ್ ನಲ್ಲಿ ಭಾಗವಹಿಸಿ ಏಳು ದೇಶಗಳ ಜೊತೆ ಸ್ಪರ್ದಿಸಿ ಗೆಲುವು ಪಡೆದಿರುತ್ತಾರೆ. (ಕಝಕ್ಸ್ತಾನ್, ಕಿರ್ಗಿಸ್ತಾನ್,ಮೊಂಗೋಲಿಯಾ,ಬಾಂಗ್ಲಾದೇಶ,ಜಪಾನ್ ಮತ್ತು ಕೊರಿಯಾ) ಮತ್ತು ಒಂದು ಕಂಚಿನ ಪದಕ ವನ್ನು ಸ್ಪಾರ್ರಿಂಗ್ ಆಟದಲ್ಲಿ ೮ ದೇಶಗಳ ಜೊತೆ ಆಡಿ ಗೆದ್ದಿರುತ್ತಾರೆ. (ಕಝಕ್ಸ್ತಾನ್,ಕಿರ್ಗಿಸ್ತಾನ್,ಮೊಂಗೋಲಿಯಾ, ಬಾಂಗ್ಲಾದೇಶ, ರಶಿಯಾ, ಯುಎಇ, ರಶಿಯಾ, ಫಿಲಿಪೈನ್ಸ್ ಮತ್ತು ಕೊರಿಯಾ) ಶಶಾಂಕ್ ಮಂಜುನಾಥ್ (ಜೂನಿಯರ್ ಬ್ಲಾಕ್ ಬೆಲ್ಟ್ ೧ಸ್ಟ್ ಡ್ಯಾನ್ ೧೩ ವರ್ಷ) ಸ್ಪಾರ್ರಿಂಗ್ ನಲ್ಲಿ ೭ ದೇಶಗಳೊಂದಿಗೆ ಆದಿ ಚಿನ್ನದ ಪದಕವನ್ನು ನಮ್ಮ ದೇಶಕ್ಕೆ ಗಳಿಸಿದ್ಧಾರೆ. (ಜಪಾನ್, ಕಾಂಬೋಡಿಯಾ,ಫಿಲಿಪೈನ್ಸ್,ರಷ್ಯಾ, ಕಝಕಿಸ್ತಾನ್ ಮತ್ತು ಯುಎಇ) ಮತ್ತು ಪ್ಯಾಟರ್ನ್ಸ್ ನಲ್ಲಿ ಒಂದು ಚಿನ್ನದ ಪದಕವನ್ನು ೭ ದೇಶಗಳೊಂದಿಗೆ (ಮಲೇಷ್ಯಾ,ಬಾಂಗ್ಲಾದೇಶ,ಕೊರಿಯಾ,ಜಪಾನ್‌ಆ, ಮೊಂಗೋಲಿಯಾ,ತುರ್ಕಿಸ್ತಾನ್ ಮತ್ತು ಕಝಕಿಸ್ಥಾನ್) ಆಡಿ ಗೆದ್ದು ಜಯಶೀಲರಾಗಿರುತ್ತಾರೆ.
