ಉದಯವಾಹಿನಿ, ಬೆಂಗಳೂರು: ಕುಡಿದು ವಾಹನ ಚಲಾಯಿಸುವವರ ವಿರುದ್ಧ ನಗರ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಒಂದೇ ದಿನ ೨೦೦ ಪ್ರಕರಣ ದಾಖಲಿಸಿದ್ದಾರೆ. ಕೋರಮಂಗಲವೊಂದರಲ್ಲೆ ೪೦ ಪ್ರಕರಣ ದಾಖಲಾಗಿವೆ.
ನಗರದಾದ್ಯಂತ ಕಾರ್ಯಾಚರಣೆ ನಡೆಸಲಾಯಿತು. ಮದ್ಯಪಾನ ಮಾಡಿದ ಚಾಲಕರು ಮತ್ತು ಸವಾರರ ವಿರುದ್ಧ ೨೦೧ ಪ್ರಕರಣಗಳು ದಾಖಲಾಗಿವೆ. ಟ್ರಾಫಿಕ್ ಪೊಲೀಸರು ನಗರಾದ್ಯಂತ ಬೀಡುಬಿಟ್ಟಿದ್ದು, ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿದ್ದಾರೆ.

೩೪,೬೭೬ ವಾಹನಗಳನ್ನು ತಪಾಸಣೆ ನಡೆಸಿ, ೭೭೯ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್.ಅನುಚೇತ್ ಬಿಎಂ ತಿಳಿಸಿದ್ದಾರೆ. ದಕ್ಷಿಣ ವಿಭಾಗದಲ್ಲಿ ಅಧಿಕಾರಿಗಳು ೯,೬೧೫ ವಾಹನಗಳನ್ನು ಪರಿಶೀಲಿಸಿದ್ದಾರೆ. ೨೦೧ ಚಾಲಕರು ಕಾನೂನು ಉಲ್ಲಂಘಿಸಿದ್ದಾರೆ. ಆಡುಗೋಡಿಯಲ್ಲಿ ೧,೭೮೩ ವಾಹನಗಳ ತಪಾಸಣೆ ನಡೆಸಲಾಗಿದ್ದು, ೪೧ ಡ್ರಂಕ್ & ಡ್ರೈವ್ ಕೇಸ್ ದಾಖಲಾಗಿದೆ. ಆಡುಗೋಡಿ ಮೊದಲ ಸ್ಥಾನದಲ್ಲಿದೆ. ೧,೬೭೮ ವಾಹನಗಳ ಪೈಕಿ ೧೯ ಪ್ರಕರಣಗಳೊಂದಿಗೆ ಎಚ್‌ಎಸ್‌ಆರ್ ಲೇಔಟ್ ನಂತರದ ಸ್ಥಾನದಲ್ಲಿದೆ.
ಸಂಚಾರ ದಟ್ಟಣೆ ಕಡಿಮೆ ಇರುವ ಕೆ.ಎಸ್.ಲೇಔಟ್, ತಲಘಟ್ಟಪುರದಂತಹ ಪ್ರದೇಶಗಳಲ್ಲಿಯೂ ಪ್ರಕರಣ ದಾಖಲಾಗಿದೆ. ಜಯನಗರ ಮತ್ತು ಬನಶಂಕರಿಯಲ್ಲಿ ಕ್ರಮವಾಗಿ ೧೭ ಮತ್ತು ಎಂಟು ಪ್ರಕರಣಗಳನ್ನು ದಾಖಲಿಸಿದೆ.ಯಾರೂ ಮದ್ಯಪಾನ ಮಾಡಿ ವಾಹನ ಚಲಾಯಿಸದಂತೆ ನೋಡಿಕೊಳ್ಳಲು ಕ್ರಮವಹಿಸಿದ್ದೇವೆ ಎಂದು ದಕ್ಷಿಣ ವಿಭಾಗದ ಸಂಚಾರ ಪೊಲೀಸ್ ಉಪ ಪೊಲೀಸ್ ಆಯುಕ್ತ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!