ಉದಯವಾಹಿನಿ, ವಿಜಯಪುರ – : ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪರೀಕ್ಷೆ ಹಾಗೂ ಮೌಲ್ಯಮಾಪನ ಕಾರ್ಯಕ್ಕೆ ರುಕ್ಷಾ ಅಧ್ಯಕ್ಷರಿಂದ ಪ್ರತಿ ಬಾರಿಯೂ ಪರೀಕ್ಷೆಯ ಸಮಯದಲ್ಲಿ ಒಂದಿಲ್ಲ ಒಂದು ಸಮಸ್ಯೆಯನ್ನು ಮಾಡುತ್ತಾ ವಿದ್ಯಾರ್ಥಿ ಭವಿಷ್ಯದ ಜೊತೆ ಆಟ ಆಡುತ್ತಿದ್ದಾರೆ. ಏಕರೂಪ ಶುಲ್ಕ ಮುಂದಿಟ್ಟುಕೊಂಡು ಆಟ ಆಡುತ್ತಿದ್ದಾರೆ ಆದರೆ ಅವರ ಬೇಡಿಕೆಗೆ ವಿಶ್ವವಿದ್ಯಾಲಯ ಸ್ಪಂದಿಸುತ್ತಿದ್ದರು ಸಹಿತ ಸುಖ ಸುಮನೆ ಆರೋಪ ಮಾಡುವುದು ಇವರ ಚಾಳಿಯಾಗಿದೆ. ಯುಜಿಸಿಯಾಗಲಿ ನಾನ್ ಯುಜಿಸಿ ಶಿಕ್ಷಕರಾಗಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುವುದು ಸರಿಯಲ್ಲ. ರುಕ್ಟ್ ಅಧ್ಯಕ್ಷರ ಪ್ರೊಫೆಸರ್ ಎಂ ಎ ಬಿರಾದಾರ್ ಬ್ಲಾಕ್ ಮೇಲ್ ತಂತ್ರಕ್ಕೆ ಮಣಿಯದೆ ನಾನ್ ಯುಜಿಸಿ ಟೀಚರ್ ಅಸೋಷಿಯೇಶನ್ ಈಗಾಗಲೇ ವಿಶ್ವವಿದ್ಯಾಲಯಕ್ಕೆ ತಮ್ಮ ಮನವಿ ಪತ್ರ ನೀಡಿದ್ದು ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯ ಕಾರ್ಯಕ್ಕೆ, ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಿ ವಿಶ್ವವಿದ್ಯಾಲಯದ ಜೊತೆ ಕೈಜೋಡಿಸುತ್ತೇವೆ ಎಂದು ನಾನ್ ಯುಜಿಸಿ ಟೀಚರ್ ಅಸೋಷಿಯೇಶನ್ ತಿಳಿಸಿದ್ದಾರೆ.
