ಉದಯವಾಹಿನಿ, : ರುಚಿಯಲ್ಲಿ ಕಹಿಯಾದ ಹಾಗಲಕಾಯಿ ಮಾತ್ರವಲ್ಲ ಅದರ ಎಲೆಗಳಲ್ಲಿಯೂ ಸಹ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಎ, ಸಿ ವಿಟಮಿನ್‌ಗಳು, ಮಿನರಲ್ಸ್ ಜೊತೆಗೆ ಫೋಲೇಟ್‌, ಪೊಟ್ಯಾಸಿಯಂ ಸೇರಿದಂತೆ ಹಲವು ಔಷಧೀಯ ಗುಣಗಳು ಅಡಕವಾಗಿವೆ.ಶುಗರ್‌ ಸಮಸ್ಯೆ ಇರುವವರಿಗೆ ಹಾಗಲಕಾಯಿಯಂತೆ ಅದರ ಎಲೆಗಳು ಕೂಡ ದಿವ್ಯೌಷಧ. ಹಾಗಲಕಾಯಿ ಎಲೆಯಿಂದ ಶುಗರ್‌ ಎಷ್ಟೇ ಹೆಚ್ಚಾಗಿದ್ದರೂ ಥಟ್‌ ಅಂತ ಕಂಟ್ರೋಲ್‌ಗೆ ಬರುತ್ತದೆ.ಹಾಗಲಕಾಯಿ ಎಲೆಗಳಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಏರುಪೇರಾಗಿರುವ ಇನ್ಸುಲಿನ್‌ ಮಟ್ಟವನ್ನು ಕೂಡಲೇ ಕಂಟ್ರೋಲ್‌ ಮಾಡುವುದರಿಂದ ಮಧುಮೇಹಿಗಳಿಗೆ ಇದು ವರದಾನಕ್ಕಿಂತ ಕಡಿಮೆ ಇಲ್ಲ ಎಂತಲೇ ಹೇಳಬಹುದು.
ಹಾಗಲಕಾಯಿ ಎಲೆ ಹೈ ಶುಗರ್‌ ರೋಗಿಗಳಿಗೆ ವರದಾನವಾದರೆ, ಶುಗರ್‌ ಲೋ ಇರುವವರು ಹಾಗಲಕಾಯಿ ಎಲೆಗಳನ್ನು ತಿನ್ನುವುದರಿಂದ ಅಥವಾ ಅದರ ಜ್ಯೂಸ್‌ ತಯಾರಿಸಿ ಕುಡಿಯುವುದರಿಂದ ಅವರ ಶುಗರ್‌ ಲೆವೆಲ್‌ ಇನ್ನೂ ಕಡಿಮೆ ಆಗುವ ಅಪಾಯ ಹೆಚ್ಚಿರುತ್ತದೆ. ಹಾಗಾಗಿ, ಲೋ ಶುಗರ್‌ ಸಮಸ್ಯೆ ಇದ್ದವರು ಇದನ್ನು ಬಳಸಬಾರದು. ಹಾಗಲಕಾಯಿ ಎಲೆ ಶುಗರ್‌ ಕಂಟ್ರೋಲ್‌ ಮಾಡಲು ಮಾತ್ರವಲ್ಲ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರಿಗೂ ತುಂಬಾ ಪ್ರಯೋಜನಕಾರಿ ಆಗಿದೆ. ಹಾಗಲಕಾಯಿ ಎಲೆಯ ಜ್ಯೂಸ್‌ ತಯಾರಿಸಿ ಕುಡಿಯುತ್ತಾ ಬಂದರೆ ಕೆಲವೇ ದಿನಗಳಲ್ಲಿ ದುಂಡಗಿನ ಹೊಟ್ಟೆ ಕರಗಿ ಚಪ್ಪಟೆಯಾಗುತ್ತದೆ. ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ.

Leave a Reply

Your email address will not be published. Required fields are marked *

error: Content is protected !!