ಉದಯವಾಹಿನಿ, : ಪಾಪ್‌ ಕಾರ್ನ್‌ ತಿನ್ನುವುದು ದೇಹದ ಆರೋಗ್ಯಕ್ಕೆ ಹಾನಿಕರ ಎನ್ನುವುದು ಈಗಾಗಲೇ ಹೇಳಲಾಗಿದೆ. ಪಾಪ್ ಆರ್ನ್‌ ಸ್ವ ರುಚಿನ ಹೊಂದಿರುವುದಿಲ್ಲ. ಡೀಅಸಿಟಿಲೇಟೆಡ್‌ ಎನ್ನುವುದು ಅದನ್ನು ರುಚಿಕರವಾಗಿಸುತ್ತದೆ. ಪಾಪ್‌ ಕಾರ್ನ್‌ ತಯಾರು ಮಾಡುವ ಕಾಳುಗಳು ಶುದ್ಧವಾದವೇ ಎಂಬುದು ಕಂಪನಿಗಳು ಖಚಿತ ಪಡಿಸಿರುವುದಿಲ್ಲ. ಕೆಲವೊಮ್ಮೆ ಪಾಪ್‌ ಕಾರ್ನ್‌ಗೆ ಯಾವ ಎಣ್ಣೆ ಉಪಯೋಗಿಸಿರುತ್ತಾರೆ ಗೊತ್ತಿರಲ್ಲ. ಬಾಕ್ಸ್‌ನಲ್ಲಿ ಬರುವಂತಹ ಆಹಾರಗಳನ್ನು ಸೇವನೆ ಮಾಡುವುದು ತಪ್ಪಿಸಬೇಕು. ಮಾಂಸ, ಆಹಾರ, ಹಣ್ಣುಗಳು ಸೇರಿದಂತೆ ಇತರೆ ವಸ್ತುಗಳನ್ನು ಬಾಕ್ಸ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಇವುಗಳಿಂದ ಕ್ಯಾನ್ಸರ್‌ ಸುಲಭವಾಗಿ ಬರುತ್ತದೆ ಎನ್ನಲಾಗುತ್ತದೆ. ಏಕೆಂದರೆ ಬಾಕ್ಸ್‌ನಲ್ಲಿ ಆಹಾರ ತುಂಬಬೇಕಾದರೆ ಕೆಟ್ಟು ಹೋಗಬಾರದು ಎಂದು ರಾಸಾಯನಿಕಗನ್ನು ಸಿಂಪಡಿಸುತ್ತಾರೆ. ಹೀಗಾಗಿ ಇಂತಹ ಆಹಾರಗಳಿಂದ ಆದಷ್ಟು ಅಂತರ ಕಾಪಾಡಿಕೊಳ್ಳುವುದು ಆರೋಗ್ಯಕ್ಕೆ ಉತ್ತಮ.
ತಂಪು ಪಾನೀಯಗಳು ಅಥವಾ ಕೂಲ್‌ಡ್ರಿಂಕ್ಸ್‌ ಸಕ್ಕರೆ ಪ್ರಮಾಣಗಳನ್ನು ಹೆಚ್ಚಾಗಿ ಹೊಂದಿರುವುದರಿಂದ ಇವು ಸುಖ ಸುಮ್ಮನೆ ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಕೂಲ್‌ಡ್ರಿಂಕ್ಸ್‌ಗಳಲ್ಲಿ ಕೃತಕ ಕ್ಯಾರಮಲ್ ಬಣ್ಣಗಳನ್ನು ಬಳಕೆ ಮಾಡುವುದರಿಂದ ಇವುಗಳು ದೇಹದ ಒಳಗೆ ಹಾನಿ ಮಾಡುತ್ತವೆ. ನೀರು ಒಳ್ಳೆಯದು, ಆದ್ರೆ ತಂಪು ಪಾನೀಯ ಹಾನಿಕಾರಕ. ಬೆಂಕಿಯಲ್ಲಿ ಸುಟ್ಟಂತಹ ಕೆಂಪು ಮಾಂಸ ಯಾವಾಗಲೂ ದೇಹಕ್ಕೆ ಹಾನಿ ಮಾಡುತ್ತದೆ. ಬೇಯಿಸಿದ ಮಾಂಸವು ರುಚಿಕರವಾಗಿಸುತ್ತದೆ. ಆದರೆ ಅದನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದಾಗ ಅದು ಕ್ಯಾನ್ಸರ್‌ ಉಂಟುಮಾಡುವ ಹೈಡ್ರೋಕಾರ್ಬನ್‌ಗಳನ್ನು ಉಂಟುಮಾಡುತ್ತದೆ. ಚಿಕನ್‌ ಬಿಳಿ ಮಾಂಸವೆಂದು ಗುರುತಿಸಲಾಗಿದೆ.
ಸಸ್ಯ ಜನ್ಯ ಎಣ್ಣೆ ಎಂದರೆ ಸಸ್ಯಗಳ ಬೀಜಗಳು, ಹಣ್ಣುಗಳು, ಅಥವಾ ಧಾನ್ಯಗಳಿಂದ ತಯಾರು ಮಾಡಲಾದ ಎಣ್ಣೆ ಆಗಿರುತ್ತದೆ. ಸಂಸ್ಕರಿಸಿದ ಆಹಾರ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತದೆ. ಇವುಗಳು ಆಕ್ಸಿಡಿಕರಣವಾಗಿರುತ್ತವೆ. ಯರಿಯೂತ ಮತ್ತು ಜೀವಕೋಶಗಳಿಗೆ ಆಕ್ಸಿಡೇಟಿವ್‌ ಹಾನಿ ಮಾಡುತ್ತವೆ. ಜೀವಕೋಶಗಳ ಪೊರೆಗಳ ರಚನೆಯನ್ನ ಬದಲಾಐಿಸುತ್ತವೆ. ಇದರಿಂದ ಕ್ಯಾನ್ಸರ್‌ಗೆ ಕಾರಣವಾಗಬಹುದು.

Leave a Reply

Your email address will not be published. Required fields are marked *

error: Content is protected !!