ಉದಯವಾಹಿನಿ, ಕೋಲಾರ: ಮುಖ್ಯ ಮಂತ್ರಿಗಳ ಬದಲಾವಣೆ ನೊರಕ್ಕೆ ನೊರಷ್ಟು ಅಗುವುದಿಲ್ಲ. ದೇಶಪಾಂಡೆ ಹೇಳಿಕೆ ಅವರ ವೈಯುಕ್ತಿಕವಾದ ಹೇಳಿಕೆ ಅಗಿರ ಬಹುದು, ಅವರ ಹೇಳಿಕೆ ನನ್ನ ಗಮನಕ್ಕೆ ಬಂದಿಲ್ಲ. ರಾಜಕಾರಣದಲ್ಲಿ ಪ್ರತಿಯೊಬ್ಬರಿಗೆ ಉನ್ನತ ಸ್ಥಾನಮಾನದ ಬಗ್ಗೆ ಆಶೆ-ಅಕಾಂಕ್ಷೆಗಳು ಇರುವುದು ಸಹಜ ಅಲ್ಲವೇ ಎಂದು ಪ್ರಶ್ನಿಸಿದ ಅವರು ಅದರೆ ಮುಖ್ಯ ಮಂತ್ರಿಗಳ ಬದಲಾವಣೆ ವಿಷಯವಾಗಿ ಪ್ರತಿಪಕ್ಷಗಳಿಗೆ ಪ್ರಶ್ನಿಸುವಂತ ಯಾವೂದೇ ನೈತಿಕತೆ ಇಲ್ಲ. ಯಾವೂದೇ ದಾಖಲಾತಿ ಇಲ್ಲದೆ ಅರೋಪಿಸುತ್ತಿರುವ ಕುರಿತು ನ್ಯಾಯಾಲಯವು ಸಹ ಪ್ರಶ್ನಿಸಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್
ನಗರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೪ನೇ ವಾರ್ಷಿಕ ಘಟಿಕೋತ್ಸವ ನಂತರ ಮಾದ್ಯಮಗಳೊಂದಿಗೆ ಅವರು ಮಾತನಾಡಿ ಪ್ರತಿಪಕ್ಷಗಳಿಗೆ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನಗಳನ್ನು ನ್ಯಾಯಾಲಯದ ಮೂಲಕ ಪಡೆಯ ಬೇಕಾಯಿತು. ರಾಜ್ಯದ ಅಭಿವೃದ್ದಿ ಬಗ್ಗೆ ಪ್ರತಿ ಪಕ್ಷಗಳಿಗೆ ಯಾವೂದೇ ಇಚ್ಚಶಕ್ತಿಯೂ…. ಬದ್ದತೆಯೂ ಇಲ್ಲವಾಗಿರುವುದು ಸ್ವಷ್ಟವಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಸರ್ಕಾರವನ್ನು ಹೇಗಾದರೂ ಮಾಡಿ ಅಸ್ಥಿರಗೊಳಿಸ ಬೇಕೆಂಬುವುದೇ ಪ್ರತಿಪಕ್ಷಗಳ ಮುಖ್ಯ ಉದ್ದೇಶವಾಗಿದೆ. ಮುಡಾ ಹಗರಣವನ್ನು ಎತ್ತಿಕೊಂಡು ಅರೋಪಿಸುವ ಮೂಲಕ ಸಿದ್ದರಾಮಯ್ಯ ಅವರ ವಿರುದ್ದ ಕೆಟ್ಟ ಹೆಸರು ಬಿಂಬಿಸುವಂತೆ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಅಸಮಾದಾನ ವ್ಯಕ್ತ ಪಡೆಸಿದ ಅವರು ಈ ವಿಚಾರವು ನ್ಯಾಯಾಲಯದಲ್ಲಿ ವಾದ-ವಿವಾದಗಳಿಂದ ಸ್ವಷ್ಟವಾಗಲಿದೆ ಎಂದು ಹೇಳಿದರು,
ಪ್ರಶ್ನೆಯೊಂದಕ್ಕೆ ರಾಜ್ಯ ಪಾಲರು ಮುಖ್ಯ ಮಂತ್ರಿಗಳ ಮೇಲಿನ ಅರೋಪದ ಬಗ್ಗೆ ಗಮನ ಹರಿಸದೆ ಒತ್ತಡಕ್ಕೆ ಮಣಿದು ಪ್ರಾಸಿಕ್ಯೋಷನ್‌ಗೆ ಅನುಮತಿ ನೀಡಿದ್ದಾರೆ ಎಂದು ಅಭಿಪ್ರಾಯಿಸಿದ ಅವರು ಕೋವಿಡ್ ಹಗರಣದ ಬಗ್ಗೆ ಲೋಪ ದೋಷಗಳ ಕುರಿತು ತಾವುಗಳು ಸತ್ಯಹರಿಶ್ಚಂದ್ರರಲ್ಲ ಎಂಬುವುದನ್ನು ಅವರೇ ಹೇಳಿ ಕೊಂಡಿದ್ದು ತಮ್ಮ ತಪ್ಪನ್ನು ಒಪ್ಪಿ ಕೊಂಡಂತೆ ಅಗಿದೆ ಎಂದು ಪ್ರತಿಪಾದಿಸಿದರು.

 

Leave a Reply

Your email address will not be published. Required fields are marked *

error: Content is protected !!