ಉದಯವಾಹಿನಿ, ಮುಳಬಾಗಲು : ಕೆರೆ ಕುಂಟೆ ಕೃಷಿಹೊಂಡಗಳಲ್ಲಿ ಗಣೇಶ ವಿಸರ್ಜನೆ ಮಾಡದಂತೆ ಹಾಗೂ ಪೊಲೀಸ್ ನಿಯಮವನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ಕರಪತ್ರದ ಮುಖಾಂತರ ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸಬೇಕೆಂದು ರೈತಸಂಘದಿAದ ತಹಶೀಲ್ದಾರ್‌ರಿಗೆ ಗಣಪತಿ ಹಾಗೂ ಗಿಡ ನೀಡುವ ಮುಖಾಂತರ ಮನವಿ ನೀಡಿ ಒತ್ತಾಯಿಸಲಾಯಿತು.
ಪ್ರತಿವರ್ಷ ಗಣೇಶ ಹಬ್ಬವನ್ನು ಪ್ರತಿ ಹಳ್ಳಿಯಲ್ಲೂ, ಗಲ್ಲಿಗಲ್ಲಿಯಲ್ಲೂ ವಿಘ್ನೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಸಡಗರ ಸಂಭ್ರಮದಿAದ ಹಬ್ಬವನ್ನು ಆಚರಣೆ ಮಾಡುತ್ತಾರೆ. ಆದರೆ, ಆಚರಣೆಯ ನಂತರ ಗಣೇಶ ವಿಸರ್ಜನೆ ಮಾಡುವಾಗ ಕೆಲವು ಲೋಪದೋಷಗಳಿಗೆ ಯುವಜನತೆ ವಿದ್ಯುತ್ ಅವಘಡ, ಕೆರೆಕುಂಟೆ, ಕೃಷಿ ಹೊಂಡಗಳಲ್ಲಿ ಮುಳುಗಿ ಪ್ರಾಣ ಬಿಟ್ಟಿರುವ ಉದಾಹರಣೆಗಳಿದ್ದರೂ ಮುಂಜಾಗ್ರತ ಕ್ರಮಗಳನ್ನು ವಹಿಸುವಲ್ಲಿ ಯುವಕರು ಹಾದಿ ತಪ್ಪುತ್ತಿರುವುದು ದುರಾದೃಷ್ಟಕರ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲೆಗೆ ಕೆಸಿವ್ಯಾಲಿ ನೀರು ಹರಿದು ೨೮೦ ಕೆರೆ ಕೋಡಿ ಹರಿಯುವ ಜೊತೆಗೆ ಅಕ್ಕಪಕ್ಕದ ಕುಂಟೆಗಳು ತುಂಬಿರುವ ಜೊತೆಗೆ ಲಕ್ಷಾಂತರ ರೂಪಾಯಿ ಅನುದಾನದಲ್ಲಿ ರೈತರಿಗೆ ವರದಾನವಾಗಬೇಕಾದ ಕೃಷಿ ಹೊಂಡಗಳು ಕೆಲವು ಕಡೆ ಮೃತ್ಯುಕೂಪಗಳಾಗಿ ಮಾರ್ಪಟ್ಟಿರುವ ಉದಾಹರಣೆಗಳು ಸಾಕಷ್ಟಿವೆ. ನೀರು ಕುಡಿಯಲು, ಈಜಲು ಹೋದ ಮಕ್ಕಳು ನೀರಿನಲ್ಲಿಯೇ ಮುಳುಗಿ ಪ್ರಾಣ ಬಿಟ್ಟಿರುತ್ತಾರೆ. ಆದರೂ ಸಹ ಸುರಕ್ಷಿತಾ ಕ್ರಮವಾಗಿ ಕೃಷಿ ಇಲಾಖೆಯಿಂದ ಯಾವುದೇ ಬೇಲಿ ಅಳವಡಿಸದೆ ನಿರ್ಲಕ್ಷ್ಯ ಮಾಡಿರುವುದರಿಂದ ಬದುಕಿ ಬಾಳಬೇಕಾದ ಜೀವಗಳು ಪರಿಸರ ಸ್ನೇಹಿ ಮಣ್ಣಿನ ಗಣಪತಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪರಿಸರಕ್ಕೆ ಹಾನಿಯಾಗುವ ಪಿಒಪಿ ಗಣಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿ ಪರಿಸರ ಉಳಿವಿಗೆ ಗ್ರಾಮೀಣ ಹಾಗೂ ನಗರ ಪ್ರದೇಶದ ಜನರು ಸಹಕರಿಸಲು ಅರಿವು ಮೂಡಿಸಬೇಕೆಂದು ಒತ್ತಾಯಿಸಿದರು.

Leave a Reply

Your email address will not be published. Required fields are marked *

error: Content is protected !!