ಉದಯವಾಹಿನಿ, ಕೂಡ್ಲಿಗಿ: ರೈತರು ಬೆಳೆದ ಬೆಳೆಯನ್ನು ಗ್ರಾಮದಲ್ಲಿ ಹಾದುಹೋಗುವ ರಸ್ತೆಯಲ್ಲೇ ಒಕ್ಕಲುತನ ಮಾಡುತ್ತಿದ್ದು ಕಲ್ಲನ್ನು ಸಹ ರಸ್ತೆ ಮದ್ಯೆಯೇ ಹಾಕುತ್ತಿದ್ದರಿಂದ ವಾಹನ ಸವಾರರು ಸಂಚಾರ ಮಾಡುವಲ್ಲಿ ಹೈರಾಣವಾಗಿದ್ದಾರೆ ಅಲ್ಲದೆ ಕಿರಿದಾದ ರಸ್ತೆಯಲ್ಲಿ ಶಾಲಾ ಕಾಲೇಜ್ ಮಕ್ಕಳನ್ನು ಕರೆದುಕೊಂಡು ಹೋಗುವ ಸಾರಿಗೆ ಸಂಸ್ಥೆ ಬಸ್ ಓಡಾಡುವಾಗ ಆಕಸ್ಮಿಕ ರಸ್ತೆಗೆ ಹಾಕಿದ ಕಲ್ಲನ್ನೇರಿ ಪಕ್ಕದ ತಗ್ಗಿಗೆ ಬಿದ್ದು ಏನಾದರು ಅನಾಹುತವಾದರೆ ನೂರಾರು ಮಕ್ಕಳ ಪ್ರಾಣಕ್ಕೆ ಯಾರು ಹೊಣೆ ಎಂದು ಪ್ರಜ್ಞಾವಂತರ ಪ್ರಶ್ನೆಯಾಗಿದ್ದು ಬಸ್ ಚಾಲಕರು ಸಹ ಗ್ರಾಮಗಳಿಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ.
ತಾಲೂಕಿನ ಹನಸಿ ಕಡೆಯ ರಸ್ತೆ ಅಂದರೆ ಹೈವೇ 50ರ ಹನಸಿ ಕ್ರಾಸ್ ನಿಂದ ಹನಸಿವರೆಗೆ, ಬಡೇಲಡಕು ಗ್ರಾಮದಿಂದ ಕೊಟ್ಟೂರು ಕಡೆ ಹೋಗುವ ರಸ್ತೆಗಳು ಸೇರಿದಂತೆ ತಾಲೂಕಿನ ಇತರೆಡೆ ರಸ್ತೆಗಳಲ್ಲಿ ರೈತರ ಬೆಳೆಗಳಾದ ಜೋಳ, ಸಜ್ಜೆ ಸೇರಿದಂತೆ ಇತರೆ ಬೆಳೆಗಳ ಒಕ್ಕಲುತನವನ್ನು ಮಾಡಲು ರಸ್ತೆಗಳೇ ಕಣಗಳಾಗಿದ್ದು ರಸ್ತೆಯ ಅರ್ಧ ಭಾಗವನ್ನು ಅಕ್ರಮಿಸಿಕೊಂಡಂತೆ ಬೆಳೆಯ ರಾಶಿಯನ್ನು ಹಾಕಿಕೊಂಡು ರಸ್ತೆಯ ಮದ್ಯದಲ್ಲೇ ಮುಚ್ಚುವ ತಾಡಪಲ್ ಗೆ ಕಲ್ಲುಗಳನ್ನು ಇಟ್ಟಿದ್ದು ಇದರಿಂದ ವಾಹನ ಚಾಲಕರು ಈ ಕಿರಿದಾದ ರಸ್ತೆ ದಾಟುವಲ್ಲಿ ಹೈರಾಣವಾಗುತ್ತಿದ್ದಾರೆ ಎಂದು ಹೇಳಬಹುದಾಗಿದ್ದು
ದಿನಾಲೂ ಮಕ್ಕಳನ್ನು ಶಾಲಾ ಕಾಲೇಜಿಗೆ ಕರೆದುಕೊಂಡು ಹೋಗಿಬರುವ ಬಸ್ ಚಾಲಕರ ಗೋಳು ಹೇಳತೀರದು ನೂರಾರು ಮಕ್ಕಳು ಆ ಬಸ್ಸಿನಲ್ಲಿರುತ್ತಾರೆ ಆಯಾ ಗ್ರಾಮದ ರೈತರ ಮಕ್ಕಳು ತಾನೇ ಶಾಲಾ ಕಾಲೇಜಿಗೆ ತೆರಳುತ್ತಿರುತ್ತಾರೆ ಎಂಬುದನ್ನು ರೈತರು ಮೊದಲು ತಿಳಿದುಕೊಳ್ಳಬೇಕು. ಕೂಡ್ಲಿಗಿ ಘಟಕದಿಂದ ಹನಸಿ, ಬಡೇಲಡಕು ಸೇರಿದಂತೆ ತಾಲೂಕಿನ ಇತರೆಡೆ ಗ್ರಾಮೀಣ ಪ್ರದೇಶದಲ್ಲಿ ರಸ್ತೆಯಲ್ಲಿ ಹಾಕಿರುವ ಬೆಳೆಗಳ ಒಕ್ಕಲುತನದಿಂದ ಬಸ್ ಓಡಾಡಲು ತೊಂದರೆಯಾಗುತ್ತಿದೆ ಸ್ವಲ್ಪ ಯಾಮಾರಿದರು ರಸ್ತೆ ಪಕ್ಕದ ತಗ್ಗಿಗೆ ಹೋಗುವುದರಲ್ಲಿ ಅನುಮಾನವಿಲ್ಲ ಎಂದು ಚಾಲಕ ನಿರ್ವಾಹಕರ ಗೋಳಾಗಿದ್ದು ನೂರಾರು ಶಾಲಾ ಮಕ್ಕಳು ಬಸ್ಸಿನಲ್ಲಿರುತ್ತಿದ್ದೂ ಮಕ್ಕಳ ಪ್ರಾಣ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮದಾಗಿದ್ದು ಕಿರಿದಾದ ರಸ್ತೆಯಲ್ಲಿ ನಾವು ಹೋಗಲು ಆಗುವುದಿಲ್ಲ ಎಂದು ಚಾಲಕ ನಿರ್ವಾಹಕರು ಹೋಗಲು ಹಿಂದೇಟು ಹಾಕುತ್ತಿದ್ದಾರೆ.
