ಉದಯವಾಹಿನಿ, ಜಯನಗರ : ಬಾಂಧವ ಸಾಮಾಜಿಕ ಸೇವಾ ಸಂಸ್ಥೆ ವತಿಯಿಂದ ಎಲ್.ಐ.ಸಿ.ಕಾಲೋನಿ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಜೇಡಿ ಮಣ್ಣಿನ ಗಣೇಶ ವಿತರಿಸಲಾಯಿತು. ಮಾಜಿ ಶಾಸಕಿ, ಕೆಪಿಸಿಸಿ ಮಹಿಳಾ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿರವರು, ಆಡಳಿತ ಪಕ್ಷದ ಮಾಜಿ ನಾಯಕರು, ಜಯನಗರ ಗ್ಯಾರೆಂಟಿ ಯೋಜನೆ ಆನುಷ್ಠಾನ ಸಮಿತಿ ಅಧ್ಯಕ್ಷರಾದ ಎನ್.ನಾಗರಾಜು ಮಣ್ಣಿನ ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ವಿತರಿಸಿದರು.
ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರ ಮಾರ್ಗದರ್ಶನದಲ್ಲಿ ಬೈರಸಂದ್ರ ವಾರ್ಡ್ ನಲ್ಲಿ ೯ ವರ್ಷದಿಂದ ಕೆರೆಯಿಂದ ಜೇಡಿ ಮಣ್ಣಿನಿಂದ ತಯಾರಿಸಿದ ಗೌರಿ, ಗಣೇಶ ಮೂರ್ತಿಗಳನ್ನು ಬಾಂಧವ ಸಂಸ್ಥೆ ವತಿಯಿಂದ ಸಾರ್ವಜನಿಕರಿಗೆ ಪರಿಸರ ಜಾಗೃತಿ ಅಭಿಯಾನದ ಜೊತೆಯಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ ಅಚರಣೆ ಪ್ರಯುಕ್ತ ಸಾವಿರಾರು ಜೇಡಿ ಮಣ್ಣಿನ ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ ಎಂದು ಎನ್.ನಾಗರಾಜು ಹೇಳಿದರು. ಬಾಂಧವ ಸಂಸ್ಥೆ ಕಲೆ, ಸಾಹಿತ್ಯ, ಮಕ್ಕಳ ಶಿಕ್ಷಣ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಹ ಸಹಕಾರ ನೀಡುತ್ತಾ ಬಂದಿದೆ.ಹಿಂದೂ,ಮುಸ್ಲಿಂ, ಕಿಶ್ಚಿಯನ್ ಎಲ್ಲ ಸಮುದಾಯದವರು ಒಟ್ಟಾಗಿ ಸೇರಿ ನಮ್ಮ ವಾರ್ಡ್ ನಲ್ಲಿ ಗಣೇಶ ಹಬ್ಬ ಅಚರಿಸಲಾಗುತ್ತದೆ.ಪರಿಸರ ಉಳಿದರೆ ಮಾತ್ರ ಮನುಷ್ಯ ಉಳಿಯಲು ಸಾಧ್ಯ, ಮುಂದಿನ ಜನಾಂಗಕ್ಕೆ ಪರಿಸರ ನಾಶ ಮಾಡದೇ ಉಳಿಸಬೇಕು ಎಂಬ ಉದ್ದೇಶದಿಂದ ಭಾಂಧವ ಸಂಸ್ಥೆ ಶ್ರಮಿಸುತ್ತಿದೆ.ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ ಮತ್ತು ಕಾಂಗ್ರೆಸ್ ಪಕ್ಷದ ೫ ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಕುಟುಂಬಗಳಿಗೆ ತಲುಪಿದೆ. ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಜನಪರ ಆಡಳಿತಕ್ಕೆ ಅಭೂತಪೂರ್ವ ಸಹಕಾರ ನೀಡುತ್ತಿದ್ದಾರೆ. ಗಣೇಶ ಹಬ್ಬ ಎಲ್ಲರ ಬಾಳಿನಲ್ಲಿ ಸುಖ, ಶಾಂತಿ ನೆಮ್ಮದ್ದಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
