ಉದಯವಾಹಿನಿ, ಕೋಲಾರ : ರೈತರು ಈಗಾಗಲೇ ಅನೇಕ ಸಮಸ್ಯೆಗಳನ್ನು ಎದಿರುಸುತ್ತಿದ್ದು, ರೈತರನ್ನು ಸಂಕಷ್ಟಕ್ಕೀಡು ಮಾಡದೆ ಕಷ್ಟದಿಂದ ಪಾರುಮಾಡುವಂತಹ ರೈತರಿಗೆ ನೆರವಾಗುವಂತಹ ಕಾನೂನುಗಳನ್ನು ಕೂಡಲೇ ಜಾರಿ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕೋಲಾರ ಜಿಲ್ಲಾ ಸಮಿತಿ ವತಿಯಿಂದ ಬೆಸ್ಕಾಂ ಇಲಾಖೆಯ ಎಸ್.ಇ.ಓಅವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕೋಲಾರ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಮಾತನಾಡಿ, ಕೋಲಾರ ಜಿಲ್ಲೆಯ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ತಾವುಗಳು ಕೂಡಲೇ ಇದರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ನಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದ್ದಾರೆ.
ಹಿಂದಿನಂತೆ ಅಕ್ರಮ-ಸಕ್ರಮದಡಿಯಲ್ಲಿ ರೈತರ ಬೋರ್ ವೆಲ್‌ಗಳಿಗೆ ಟ್ರಾನ್ಸ್ ಫಾರ್ಮರ್ ನೀಡಬೇಕು, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಕೈಬಿಡಬೇಕು, ದಿನಾಂಕ: ೨೨-೦೯-೨೦೨೩ರ ನಂತರ ನೋಂದಾಯಿಸಲ್ಪಡುವ ಐಪಿ ಸೆಟ್‌ಗಳಿಗೆ ಮೂಲ ಸೌಕರ್ಯವನ್ನು ರೈತರು ಸ್ವಯಂ ಕಾರ್ಯನಿರ್ವಹಣೆಯಲ್ಲಿ ರಚಿಸಿಕೊಳ್ಳತಕ್ಕದ್ದು, ಪಂಪ್‌ಸೆಟ್ ಸೌಲಭ್ಯವನ್ನು ಸ್ಥಳೀಯ ಅವಶ್ಯಕತೆಯಂತೆ ಗುರ್ತು ಮಾಡಿ ೧೦ ಹೆಚ್.ಪಿ ಸಾಮರ್ಥ್ಯಕ್ಕೆ ಮಿತಿಗೊಳಿಸುವುದು.
ಆದಾಗ್ಯೂ ಎಂ.ಎನ್.ಆರ್.ಇ. ಪರತ್ತುಗಳ ಪ್ರಕಾರ ೭.೫ ಹೆಚ್.ಪಿ ಸಾಮರ್ಥ್ಯಕ್ಕೆ ಅನುಗುಣವಾಗಿ ಸಬ್ಸಿಡಿ/ಅನುದಾನವು ಸೀಮಿತಗೊಳಿಸಿರುವುದು ಮತ್ತು ನೀರಾವರಿ ಪಂಪ್ ಸೆಟ್‌ಗಳ ಬಗ್ಗೆ ಈ ಹಿಂದೆ ಹೊರಡಿಸಲಾಗಿದ್ದ ಎಲ್ಲಾ ಸರ್ಕಾರಿ ಆದೇಶ/ಸುತ್ತೋಲೆಗಳನ್ನು ಹಿಂಪಡೆಯಲಾಗಿದೆ.
ಕೂಡಲೇ ರೈತರು ಕಷ್ಟದಲ್ಲಿದ್ದು. ಇನ್ನು ರೈತರನ್ನು ಸಂಕಷ್ಟಕ್ಕೀಡು ಮಾಡದೆ ಕಷ್ಟದಿಂದ ಪಾರುಮಾಡುವಂತಹ ರೈತರಿಗೆ ನೆರವಾಗುವಂತಹ ಕಾನೂನುಗಳನ್ನು ಕೂಡಲೇ ಮಾಡಬೇಕೆಂದು ಆಗ್ರಹಿಸಿದ್ದಾರೆ.
