ಉದಯವಾಹಿನಿ, ಬೆಂಗಳೂರು : ಎಂಇ, ಎಂಟೆಕ್‌, ಎಂ.ಆರ್ಕಿಟೆಕ್ಚರ್‌ ಕೋರ್ಸ್‌ಗಳ ಪ್ರವೇಶಕ್ಕೆ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (ಪಿಜಿಸಿಇಟಿ) – 2024 ರ ವೇಳಾಪಟ್ಟಿಯನ್ನು ಪರಷ್ಕರಿಸಿದ್ದು, ಸೆ.18 ರಂದು ನಡೆಯಲಿದೆ.ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅಂದು ಮಧ್ಯಾಹ್ನ 1.30 ರಿಂದ 4.30 ರವರೆಗೆ ಪಿಜಿ ಸಿಇಟಿ ಪರೀಕ್ಷೆ ನಡೆಯಲಿದೆ.
ಪಿಜಿಸಿಇಟಿ ಗೆ ನೋಂದಣಿ ಮಾಡಿ, ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಸೆ.11 ರಿಂದ ಪ್ರವೇಶ ಪತ್ರವನ್ನು ಪ್ರಾಧಿಕಾರದ ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.ಪಿಜಿಸಿಇಟಿ ಪರೀಕ್ಷೆಯು ಓಎಂಆರ್‌ ಮಾದರಿಯಲ್ಲಿ ಆಫ್‌ಲೈನ್‌ ಮೂಲಕ ನಡೆಸಲಾಗುವುದು ಎಂದು ಕೆಇಎ ಪ್ರಕಟಣೆ ತಿಳಿಸಿದೆ.

ದಾಖಲೆಗಳ ಪರಿಶೀಲನೆ : 2024ನೇ ಸಾಲಿನ ಮೇಕ್‌ಅಪ್‌ (ಮರುಪರೀಕ್ಷೆ) ಅರ್ಹತೆ ಪಡೆದು ಡಿಸಿಇಟಿ 2024ರ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳಿಗೆ ರ್ಯಾಂಕ್‌ ಅನ್ನು ವೆಬ್‌ಸೈಟ್‌ನಲ್ಲೇ ಪ್ರಕಟಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಸೆ.10 ರಂದು ನಿಗಧಿಪಡಿಸಿರುವ ಡಿಪ್ಲೋಮಾ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ ಎಲ್ಲಾ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಲು ಕೆಇಎ ಸೂಚಿಸಿದೆ.
ದಾಖಲೆಯ ಪರಿಶೀಲನೆಗೆ ಹಾಜರಾಗಿರಬೇಕಿರುವ ಪಾಲಿಟೆಕ್ನಿಕ್‌ ಕಾಲೇಜುಗಳ ವಿವರವನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪರಿಶೀಲನೆ ಸಂದರ್ಭದಲ್ಲಿ ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ಕೋರಿರುವ ಕ್ಲೈಮ್‌ಗಳಿಗೆ ಪೂರಕವಾದ ಎಲ್ಲಾ ಶೈಕ್ಷಣಿಕ ಮೂಲ ದಾಖಲೆಗಳನ್ನು ಮತ್ತು ದೃಢೀಕೃತ ಒಂದು ಜೆರಾಕ್‌್ಸ ಪ್ರತಿಗಳನ್ನು ಸಲ್ಲಿಸಲು ತಿಳಿಸಿದೆ. ಪರಿಶೀಲನೆ ದಿನದಂದು ಯಾವುದೇ ದಾಖಲೆಯನ್ನು ಹಾಜರುಪಡಿಸಲು ವಿಫಲವಾದ ವಿದ್ಯಾರ್ಥಿಯ ದಾಖಲೆಗಳನ್ನು ಪರಿಶೀಲನೆ ಮಾಡುವುದಿಲ್ಲ ಹಾಗೂ ಅವರ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ.

Leave a Reply

Your email address will not be published. Required fields are marked *

error: Content is protected !!