ಉದಯವಾಹಿನಿ, ಬಳ್ಳಾರಿ : ಈ ಸ್ಥಳದಲ್ಲಿ ಗುರುಭವನ ನಿರ್ಮಿಸಬೇಕೆಂಬ ಜಿಲ್ಲೆಯ ಶಿಕ್ಷಕರ ಕನಸು ಕಳೆದ 20 ವರ್ಷಗಳಿಂದ ಕಾಣುವ ಕನಸು ಇಂದಿಗೂ ನನಸಾಗಿಲ್ಲ. ಈ ನಿವೇಶನ ವಿವಿಧ ವಾಹನಗಳ ಪಾರ್ಕಿಂಗ್ ಪ್ಲಾಟ್ ಆಗಿದೆ. ರಾಜ್ಯದ ಬಹುತೇಕ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಗುರುಭವನಗಳಿವೆ. ಶಿಕ್ಷಕರ ಸಂಘ ಮತ್ತು ಜನಪ್ರತಿನಿಧಿಗಳ ಅನುದಾನದಿಂದ ಅವುಗಳ ನಿರ್ಮಾಣ ಆಗಿವೆ.
ಗುರುಭವನಗಳು ವಿವಿಧ ತರಬೇತಿ, ಕಾರ್ಯಾಗಾರ,
ಬೇರೆ ಊರುಗಳಿಂದ ಜಿಲ್ಲಾ ಕೇಂದ್ರಕ್ಕೆ ಬಂದ ಶಿಕ್ಷಕರ ತಂಗಲು, ಕುಟುಂಬಗಳ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಬಳಸಲಾಗುತ್ತದೆ.
ಈ ಸ್ಥಳದಲ್ಲಿ ಈ ಹಿಂದೆ ಅರ್ಧಮರ್ಧ ಗುರು ಭವನ ವನ್ನು ಭೂಸೇನಾ ನಿಗಮ ನಿರ್ಮಿಸಿತ್ತು ಪೂರ್ಣಗೊಳಿಸಲು ಹಣ ದೊರೆಯದೆ ಹಾಳಾಯಿತು
ನಂತರ ಜಿಲ್ಲೆಯನ್ನು ಆಳಲು ಬಂದ ಡಿಸಿಗಳು, ಜಿಲ್ಕೆಯನ್ನಾಳಿದ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಪರಮೇಶ್ವರ ನಾಯ್ಕ, ಸಂತೋಷ್ ಲಾಡ್, ಶ್ರೀರಾಮುಲು, ಜನಾರ್ಧನ ರೆಡ್ಡಿ ಸೇರಿದಂತೆ ಎಲ್ಲರೂ ಗುರುಭವನ ನಿರ್ಮಿಸುವ ಭರವಶೆಗಳನ್ನು ನೀಡಿದ್ದರು ಭರವಸೆಗಳು ಭರವಸೆಗಳೇ ಆಗಿವೆ. ಕಳೆದ ವರ್ಷ ಸೆ 26 ರಂದು ಇದೇ ಸ್ಥಳದಲ್ಲೇ ನಡೆದಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಿ.ನಾಗೇಂದ್ರ ಅವರು 12 ಕೋಟಿ ರೂ ವೆಚ್ಷದಲ್ಲಿ ಜಿಲ್ಲಾ ಖನಿಝ ನಿಧಿಯಿಂದ ನಿರ್ಮಿಸಲಿದೆಂದು ಹೇಳಿ‌ನೆರೆದಿದ್ದ ನೂರಾರು ಶಿಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಮುಂದೆ ಮತ್ತೆ ಯಾವುದೇ ಬೆಳವಣಿಗೆ ಆಗಲಿಲ್ಲ.
18 ಬಾರಿ ಮನವಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದವರು ಪ್ರತಿ ವರ್ಷದ ಶಿಕ್ಷಕರ ದಿನಾಚರಣೆ ವೇಳೆ ಕಳೆದ 18 ವರ್ಷಗಳಿಂದ ಗುರುಭವನ ನಿರ್ಮಾಣಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!