ಉದಯವಾಹಿನಿ, ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸುವುದು ಹಾಗೂ ಇತರ ಸಮಸ್ಯೆಗಳ ಅಧ್ಯಯನಕ್ಕಾಗಿ ಸಮಿತಿ ರಚಿಸುವ ಕುರಿತಂತೆ ಸವಿಸ್ತಾರ ಚರ್ಚೆಯ ಬಳಿಕ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫೈರ್ ತಂಡಕ್ಕೆ ಭರವಸೆ ನೀಡಿದ್ದಾರೆ.
ಚಿತ್ರರಂಗದಲ್ಲಾಗುತ್ತಿರುವ ತಾರತಮ್ಯ ಹಾಗೂ ಕಿರುಕುಳದ ತನಿಖೆಗಾಗಿ ಕೇರಳದ ಮಾದರಿಯಲ್ಲಿ ನ್ಯಾಯಾಂಗ ಆಯೋಗ ರಚಿಸಬೇಕು ಎಂದು ಚಿತ್ರರಂಗದಲ್ಲಿನ ಹಕ್ಕುಗಳು ಹಾಗೂ ಸಮಾನತೆಗಾಗಿ ಶ್ರಮಿಸುತ್ತಿರುವ ಫೈರ್ ಸಂಘ ಟನೆ ಮುಖಂಡರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ನೀಡಿದರು.
ಇದಕ್ಕೆ ಸಕಾರಾತಕವಾಗಿ ಸ್ಪಂದಿಸಿದ ಸಿದ್ದರಾಮಯ್ಯ ಅವರು, ಮನವಿಯನ್ನು ಸ್ವೀಕರಿಸಿ ಇದು ಗಂಭೀರವಾದ ವಿಚಾರ, ಮತ್ತೊಮೆ ನಿಮ ತಂಡದ ಜೊತೆ ಸವಿಸ್ತಾರವಾದ ಚರ್ಚೆ ನಡೆಸುತ್ತೇನೆ. ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.ಹಿರಿಯ ಪತ್ರಕರ್ತೆ ಡಾ. ವಿಜಯಮ, ಫೈರ್ ಸಂಘಟನೆಯ ಕಾರ್ಯದರ್ಶಿಯಾದ ನಟ ಚೇತನ್, ನಟಿಯರಾದ ಶೃತಿ ಹರಿಹರನ್ ಹಾಗೂ ನೀತು ಶೆಟ್ಟಿ ಒಳಗೊಂಡ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು.
ಕೇರಳದ ಮಲಯಾಳಂ ಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಹಿಂಸೆ ಮತ್ತು ಇತರ ಸಮಸ್ಯೆಗಳನ್ನು ನ್ಯಾಯಮೂರ್ತಿ ಹೇಮಾ ಅವರ ಸಮಿತಿ ಬಹಿರಂಗಪಡಿಸಿದೆ. ಕನ್ನಡ ಚಿತ್ರರಂಗದಲ್ಲೂ ಈ ರೀತಿಯ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ದೇಶದಲ್ಲೇ ಮೊದಲ ಬಾರಿಗೆ ಫೈರ್ ಸಂಸ್ಥೆ ಕನ್ನಡ ಚಿತ್ರೋದ್ಯಮದಲ್ಲಿ ಆತಂರಿಕ ದೂರುಗಳ ಸಮಿತಿಯನ್ನು ರಚಿಸಿದೆ.
