ಉದಯವಾಹಿನಿ, ಕೆ.ಆರ್.ಪುರ: ಮಹದೇವಪುರ ಕ್ಷೇತ್ರದ ಕುಂದಲಹಳ್ಳಿಯ ಎಇಸಿಎಸ್ ಲೇಔಟ್ ನಲ್ಲಿ ರಿಪಬ್ಲಿಕನ್ ಯೂತ್ ಅಸೋಸಿಯೇಷನ್ ಹಾಗೂ ವಿನಾಯಕ ಗೆಳೆಯರ ಬಳಗದ ವತಿಯಿಂದ ಗುರು ಕೆಪಿಆರ್ ನೇತೃತ್ವದಲ್ಲಿ ೨೭ನೇ ವರ್ಷದ ಅದ್ದೂರಿ ಗಣೇಶೋತ್ಸವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಇದೆ ವೇಳೆ ಆಯೋಜಕ ಗುರುಅವರು ಮಾತನಾಡಿ ಪ್ರತಿ ವರ್ಷ ಗಣೇಶ ಚತುರ್ಥಿಯನ್ನು ಅದ್ದೂರಿಯಿಂದ ಆಚರಿಸುತ್ತೇವೆ ಕಳೆದ ಬಾರಿ ಬೆಂಗಳೂರು ನಗರಕ್ಕೆ ಎರಡನೇ ಸ್ಥಾನ ಪಡೆಯಲಾಗಿತ್ತು ಈ ಬಾರಿ ಮೊದಲ ಸ್ಥಾನ ಪಡೆಯುವ ಸಾಧ್ಯತೆಯಿದೆ ಹಾಗೆ ಈ ಬಾರಿಯೂ ಗಣೇಶ ಚತುರ್ಥಿಯನ್ನು ಆಚರಿಸುತ್ತಾ ಬರುವ ಭಕ್ತಾದಿಗಳಿಗೆ ದರ್ಶನ ಕಲ್ಪಿಸುವ ಕೆಲಸ ಮಾಡಲಾಗಿದೆ ಲಕ್ಷಾಂತರ ಮಂದಿ ಈ ಒಂದು ದೇವರ ದರ್ಶನ ಪಡೆಯಲು ಆಗಮಿಸಿದ್ದು ಮೂರು ದಿನಗಳ ಕಾಲ ಗಣಪನ ದರ್ಶನ ಭಾಗ್ಯ ಸಿಗಲಿದೆ. ಬರುವ ಪ್ರತಿ ಭಕ್ತಾದಿಗಳಿಗೂ ಪ್ರಸಾದ, ಲಡ್ಡುಗಳು ವಿನಿಯೋಗ ಮಾಡಲಾಗಿದೆ ಎಂದರು .ಇನ್ನೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಆಯೋಜನೆ ಮಾಡಲಾಗಿದೆ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಅವಕಾಶ ಕಲ್ಪಿಸಲಾಗಿತ್ತು ಭರತನಾಟ್ಯ ಡ್ಯಾನ್ಸ್ ಸಂಗೀತಗಳಿಗೆ ಹೆಜ್ಜೆ ಹಾಕುತ್ತಾ ಬರುವ ಭಕ್ತಾದಿಗಳನ್ನು ರಂಜಿಸಿದ್ದಾರೆ ಎಂದು ತಿಳಿಸಿದರು.
ಅದ್ದೂರಿ ಉತ್ಸವಕ್ಕೆ ಸಾವಿರಾರು ಮಂದಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!