ಉದಯವಾಹಿನಿ, ಪಣಜಿ: ಗೋವಾ ಪ್ರವಾಸಕ್ಕೆ ಬಂದಿದ್ದ ರಷ್ಯಾ ಪ್ರಜೆಯೊಬ್ಬರು ಅರಬ್ಬಿ ಸಮುದ್ರ ಪಾಲಾಗಿದ್ದಾರೆ. ಗೋವಾಕ್ಕೆ ಭೇಟಿ ನೀಡಿದ್ದ 33 ವರ್ಷದ ರಷ್ಯಾದ ಪ್ರಜೆಯೊಬ್ಬರು ಅರಬ್ಬಿ ಸಮುದ್ರದಲ್ಲಿ ಮುಳುಗಿ ಮತಪಟ್ಟಿದ್ದು, ಅವರ ಪಾಲುದಾರ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಗೋವಾ ಜಿಲ್ಲೆಯ ಮೊರ್ಜಿಮ್ ಬೀಚ್ ನಲ್ಲಿ ಈ ಘಟನೆ ನಡೆದಿದೆ.ರಷ್ಯಾದ ಪ್ರಜೆ ಡಿಮಿಟ್ರಿ ಎಲ್ವೊವ್ (33) ತನ್ನ ಸಂಗಾತಿ ಐರಿನಾ ರುಡೆಮ್ಕೊ (28) ಜೊತೆಗೆ ಉತ್ತರ ಗೋವಾದಲ್ಲಿ ವಿಹಾರಕ್ಕೆ ಬಂದಿದ್ದರು. ಅವರು ಮುಂಜಾನೆ 5 ಗಂಟೆ ಸುಮಾರಿಗೆ ಮೊರ್ಜಿಮ್ ಬೀಚ್‌ನಲ್ಲಿ ನೀರಿನಲ್ಲಿ ಮುಳುಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಮುದ್ರದ ಸುಳಿಯಿಂದಾಗಿ ನೀರಿಗಿಳಿದಿದ್ದ ಇಬ್ಬರು ಪ್ರಾಣ ರಕ್ಷಣೆಗಾಗಿ ಕೂಗಿಕೊಂಡಾಗ ಸ್ಥಳೀಯರು ರಷ್ಯನ್ ಮಹಿಳೆಯನ್ನು ರಕ್ಷಿಸಿದ್ದಾರೆ ಆದರೆ ಎಲ್ವೊವ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ಇಬ್ಬರೂ ನೀರಿಗೆ ಎಳೆದರು ಎಂದು ಅವರು ಹೇಳಿದರು.ನಂತರ ಮತದೇಹವನ್ನು ಜೀವರಕ್ಷಕರು ಹೊರತೆಗೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
