ಉದಯವಾಹಿನಿ, ಹೊನ್ನಾಳಿ : ಹೊನ್ನಾಳಿ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಯುವಕನನ್ನು ಪೋಲೀಸರು ಬಂಧಿಸಿದ್ದಾರೆ.ಶಿಕಾರಿಪುರದ ಹಣ್ಣಿನ ವ್ಯಾಪಾರಿ ಮುಭಾರಕ್ ಆಲಿಯಸ್ ಇಮ್ರಾನ್(26) ಬಂಧಿತ ಆರೋಪಿ. ಹೊನ್ನಾಳಿ ಪೊಲೀಸ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಹಾಗೂ ಪೊಲೀಸ್ ಸಿಬ್ಬಂದಿಗಳು, ಅಬಕಾರಿ ಡಿವೈಎಸ್ಪಿ ಮುರುಡೇಶ್ವರ್ ಉಪಸ್ಥಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಸ್ಪಿ ಉಮಾಪ್ರಶಾಂತ್ ಹಾಗೂ ಡಿವೈಎಸ್ಪಿ ರುದ್ರಪ್ಪ ಮಾರ್ಗದರ್ಶನದಲ್ಲಿ ಶಿಕಾರಿಪುರದಿಂದ ಹೊನ್ನಾಳಿಗೆ ಗಾಂಜಾ ಮಾರಾಟ ಮಾಡಲು ಐಷರಾಮಿ ಕಾರಿನಲ್ಲಿ ಬಂಧಿದ್ದ ಆರೋಪಿ ಮುಬಾರಕ್ ನನ್ನು ಸಿನಿಮೀಯ ರೀತಿಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸುನಿಲ್ ಕುಮಾರ್, ಪಟ್ಟಣದ ಎಪಿಎಂಸಿ ಸಮೀಪ ಕಾರನ್ನು ತಡೆದು ವಿಚಾರಣೆ ಮಾಡಿ ಕಾರನ್ನು ಪರಿಶೀಲಿಸಿದಾಗ 50 ಸಾವಿರ ಮೌಲ್ಯದ 498 ಗ್ರಾಂ ಗಾಂಜಾ ಸೊಪ್ಪು,ಬೀಜ,ಹೂವು ಹಾಗೂ ಮೊಗ್ಗನ್ನು ತನ್ನ ಟೀ-ಶರ್ಟಿನಲ್ಲಿ ತುಂಬಿಕೊಂಡಿದ್ದನ್ನು ಕಂಡು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮುಬಾರಕ್ ನನ್ನು ಬಂಧಿಸಿದ್ದಾರೆ.ಈ ವೇಳೆ ಪೊಲಿಸ್ ಸಿಬ್ಬಂದಿಗಳಾದ ಜಗದೀಶ್,ರಾಜಶೇಖರ್,ಮಾಲತೇಶ್,ಮಲ್ಲೇಶ್,ಜಗದೀಶ್,ಮೌನೇಶ್,ಸುರೇಶ್ ನಾಯಕ್,ರವಿ ಇದ್ದರು.
