ಉದಯವಾಹಿನಿ, ಬೆಂಗಳೂರು : ಪಿಎಸ್ ಐ ಪರೀಕ್ಷೆ ಮುಂದೂಡುವಂತೆ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಬಿಜೆಪಿ ಮನವಿ ಮಾಡಿದೆ.ಮಾಜಿ ಸಚಿವ ಅಶ್ವತ್ ನಾರಾಯಣ್ ಸೇರಿದಂತೆ ಮತ್ತಿತರರು ಇಂದು ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿ ಮಾಡಿದರು. ಭೇಟಿ ಮಾಡಿ ಪಿಎಸ್ ಐ ಪರೀಕ್ಷೆ ಮುಂದೂಡುವಂತೆ ಗೃಹ ಸಚಿವರಿಗೆ ಮನವಿ ಮಾಡಿದರು.
ಒಂದೇ ದಿನ ಪಿಎಸ್ ಐ ಹಾಗೂ UPSC ಪರೀಕ್ಷೆ ಬೇಡ, ಪರೀಕ್ಷೆ ಮುಂದೂಡುವಂತೆ ಮನವಿ ಮಾಡಿದ್ದಾರೆ.
ಜೂನ್ 16ರಂದು ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ ನಡೆದಿದ್ದು, ಸೆಪ್ಟೆಂಬರ್ 22ಕ್ಕೆ ಮುಖ್ಯ ಪರೀಕ್ಷೆ ನಡೆಯಲಿದೆ. ಪಿಎಸ್‌ಐ ಪರೀಕ್ಷೆ ಸೆ.22ರಂದು ನಡೆಯಲಿದೆ.
ಯುವಕರ ಭವಿಷ್ಯದ ಕುರಿತು ಎಳ್ಳಷ್ಟು ಕಾಳಜಿಯಿಲ್ಲದ ಭ್ರಷ್ಟ ಸರ್ಕಾರ, ಯುಪಿಎಸ್ಸಿ ಪರೀಕ್ಷೆ ನಡೆಯುವ ದಿನಾಂಕದಂದೇ ಪಿಎಸ್‌ಐ ಪರೀಕ್ಷೆ ದಿನಾಂಕ ನಿಗದಿ ಮಾಡುವ ಮೂಲಕ ಯುವಕರ ಭವಿಷ್ಯಕ್ಕೆ ಕಲ್ಲು ಹಾಕಲು ಹೊರಟಿದೆ. ಯುಪಿಎಸ್ಸಿ ಹಲವು ತಿಂಗಳುಗಳ ಮೊದಲೇ ಪರೀಕ್ಷೆ ದಿನಾಂಕ ಪ್ರಕಟಿಸುತ್ತಿದೆ. ಅದರಂತೆ, ಜೂನ್ 16ರಂದು ಯುಪಿಎಸ್ಸಿ ಪ್ರಿಲಿಮ್ಸ್ ಪರೀಕ್ಷೆ ನಡೆದಿದ್ದು, ಸೆಪ್ಟೆಂಬರ್ 22ಕ್ಕೆ ಮುಖ್ಯ ಪರೀಕ್ಷೆ ನಡೆಯಲಿದೆ. ವಿವೇಚನೆ, ಸಂವೇದನೆ ಇಲ್ಲದ ಸಿಎಂ ಸಿದ್ದರಾಮಯ್ಯನವರ ಸರ್ಕಾರ ಪಿಎಸ್‌ಐ ಪರೀಕ್ಷೆಯನ್ನು ಸೆ.22ರಂದೇ ನಡೆಸುವುದಾಗಿ ಜುಲೈ 31ರಂದು ಪ್ರಕಟಿಸಿದೆ.
